‘ರೂಮ್ ಮಾಡ್ತೀನಿ ಬಾ’ ಪಬ್ಲಿಕ್ ಪ್ಲೇಸ್‌ನಲ್ಲಿ ಕಾಮುಕನಿಗೆ ಚಪ್ಪಲಿ ಏಟು!

ಶಿರಸಿ ಬಸ್ ನಿಲ್ದಾಣದಲ್ಲಿ ‘ರೂಮ್ ಮಾಡ್ತೀನಿ ಬಾ’ ಎಂದ ಕಾಮುಕರಿಗೆ ಮಹಿಳೆಯೊಬ್ಬರು ಜನಜನರ ಮದ್ಯೆ ವ್ಯಕ್ತಿಗೆ ಚಪ್ಪಲಿ ಏಟು ನೀಡಿದ್ದು ಈಗ ಭಾರಿ ವೈರಲ್ ಆಗಿದೆ.

ಹೌದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಸಾರ್ವಜನಿಕ ಸ್ಥಳದಲ್ಲಿ ನಡೆದಿದ್ದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಯಕ್ಕಂಬಿ ಗ್ರಾಮದ ದೀಪಾ ಎಂಬ ಮಹಿಳೆ ಬಸ್‌ಗಾಗಿ ಕಾಯುತ್ತಿದ್ದಾಗ, ಮದ್ಯಪಾನ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಬಂದು ಅವಳಿಗೆ ಅಸಭ್ಯವಾಗಿ ‘ರೂಮ್ ಮಾಡ್ತೀನಿ ಬಾ’ ಎಂದು ಕರೆದಿದ್ದ.

ಈ ಶಬ್ದ ಕೇಳಿದ ಕೂಡಲೇ ದೀಪಾ ತಾಳ್ಮೆ ಕಳೆದುಕೊಂಡು, ಚಪ್ಪಲಿ ಏಟು ಕೊಟ್ಟು ಬುದ್ದಿ ಕಲಿಸಿದ್ದಾಳೆ. ಈ ದೃಶ್ಯವನ್ನೆಲ್ಲಾ ಅಲ್ಲಿದ್ದವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಘಟನೆ ನಡೆಯುತ್ತಿದ್ದಾಗಲೇ ಅಲ್ಲಿದ್ದ ಇತರ ಪ್ರಯಾಣಿಕರು ಮಹಿಳೆಯ ಬೆಂಬಲಕ್ಕೆ ಧಾವಿಸಿದ್ದಾರೆ. ಆ ವ್ಯಕ್ತಿಯ ನಡವಳಿಕೆಯನ್ನು ಖಂಡಿಸಿ ಆತನನ್ನ ಕರೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಿದ್ದು, ಪ್ರಕರಣ ದಾಖಲಾಗಿದೆ.

ಸ್ಥಳೀಯ ಮಾಹಿತಿ ಪ್ರಕಾರ, ಈ ವ್ಯಕ್ತಿ ಹಿಂದೆಯೂ ಇಂತಹ ಅನಾಚಾರಗಳಲ್ಲಿ ತೊಡಗಿದ್ದು, ಹಲವಾರು ಬಾರಿ ಮಹಿಳೆಯರನ್ನು ಕೆಣಕಿದ್ದಾನೆ ಎಂಬ ಆರೋಪಗಳಿವೆ. ಈತನಿಗೆ ಪೊಲೀಸರು ಸರಿಯಾಗಿ ಬುದ್ದಿ ಕಲಿಸಬೇಕು ಎಂದು ಅಲ್ಲಿದ್ದ ಮಹಿಳೆಯರು ಆಗ್ರಹ ಮಾಡಿದ್ದಾರೆ.

ಈ ವಿಡಿಯೋ ವೈರಲ್ ಆದ ಮೇಲೆ ನೂರಾರು ಜನರು ಕಾಮೆಂಟ್ ಮಾಡಿ, ದೀಪಾ ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author