Film News:
ಭಾರತದ ಯಾವ ಸಿನಿಮಾ ಕೂಡ ಆಸ್ಕರ್ ಪ್ರಶಸ್ತಿ ಪಡೆದಿಲ್ಲ. 21 ವರ್ಷ ಗಳ ಹಿಂದೆ ಆಮಿರ್ ಖಾನ್ ನಟನೆಯ ‘ಲಗಾನ್’ ಸಿನಿಮಾ ಆಸ್ಕರ್ಗೆ ನಾಮ ನಿರ್ದೇಶನಗೊಡಿತ್ತು. ಇದಾದ ಬಳಿಕ ಭಾರತದ ಯಾವ ಸಿನಿಮಾಗಳೂ ಆಸ್ಕರ್ಗೆ ನಾಮಿನೇಟ್ ಆಗಿಲ್ಲ. ಈ ಬಾರಿ ‘ಆರ್ಆರ್ಆರ್’ ಸಿನಿಮಾ ಆಸ್ಕರ್ನ ಎರಡು ವಿಭಾಗಗಳಲ್ಲಿ ನಾಮ ನರ‍್ದೇಶನಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಒಂದೊಮ್ಮೆ ರಾಜಮೌಳಿ ಸಿನಿಮಾ ಆಸ್ಕರ್ ಗೆದ್ದರೆ ಭಾರತ ಚಿತ್ರರಂಗದ ಪಾಲಿಗೆ ದಾಖಲೆ ನಿರ್ಮಾಣ ಆಗಲಿದೆ. ‘ಆರ್ಆರ್ಆರ್’ ಸಿನಿಮಾ ಮರ‍್ಚ್ ತಿಂಗಳಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆಯಿತು. ವಿಶ್ವ ಬಾಕ್ಸ್ ಆಫೀಸ್ನಲ್ಲೂ ಚಿತ್ರ ಅಬ್ಬರಿಸಿತು. ಒಟಿಟಿಯಲ್ಲಿ ಸಿನಿಮಾ ರಿಲೀಸ್ ಆದ ಬಳಿಕೆ ವಿಶ್ವದ ನಾನಾ ಚಿತ್ರರಂಗದ ತಂತ್ರಜ್ಞರು, ನಟರು ಈ ಚಿತ್ರವನ್ನು ವೀಕ್ಷಿಸಿ ರಾಜಮೌಳಿ ಅವರನ್ನು ಹೊಗಳಿದ್ದರು. ಈಗ ರಾಜಮೌಳಿ ಸಿನಿಮಾ ಎರಡು ವಿಭಾಗಗಳಲ್ಲಿ ಆಸ್ಕರ್ಗೆ ನಾಮನರ‍್ದೇಶನಗೊಳ್ಳುವ ಸಾಧ್ಯತೆ ಇದೆ ಎಂದು ವರದಿ ಆಗಿದೆ ಎಂದು ತಿಳಿದು ಬಂದಿದೆ.
ಸೈಮಾ ಅವಾರ್ಡ್ನ ಲ್ಲಿ ಈ ಬಾರಿ ಸ್ಟಾರ್ ಐಕಾನ್ ಯಾರು ಗೊತ್ತಾ..?! ಸೈಮಾ ಮಾಡಿದ ಆ ಟ್ವೀಟ್ ಯಾರ ಬಗ್ಗೆ..?