State News:
ಆರ್ಎಸ್ಎಸ್ ಖಾಕಿ ಚಡ್ಡಿಗೆ ಬೆಂಕಿ ಹಚ್ಚಿದ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡ ಕಾಂಗ್ರೆಸ್, ದೇಶವನ್ನು ದ್ವೇಷದ ಸಂಕೋಲೆಯಿಂದ ಮುಕ್ತಗೊಳಿಸಲು ಮತ್ತು ಬಿಜೆಪಿ, ಆರ್ಎಸ್ಎಸ್ ಮಾಡಿದ ಹಾನಿಯನ್ನು ಸರಿಪಡಿಸಲು ಹಂತ ಹಂತವಾಗಿ ನಾವು ನಮ್ಮ ಗುರಿಯನ್ನು ತಲುಪುತ್ತೇವೆ ಎಂದು ಹೇಳಿಕೊಂಡಿದೆ. ಕಾಂಗ್ರೆಸ್ನ ಟೀಕೆಗೆ ಪ್ರತಿಕ್ರಿಯಿಸಿದ ತೇಜಸ್ವಿ ಸರ‍್ಯ ಅವರು ಫೋಟೋವನ್ನು ಕಾಂಗ್ರೆಸ್ ರಾಯಕೀಯದ ಸಂಕೇತವೆಂದು ಹೇಳಿ ಕಾಂಗ್ರೆಸ್ ಪಕ್ಷದ ನಾಶದ ಬಗ್ಗೆ ಟಾಂಗ್ ಕೊಟ್ಟಿದ್ದಾರೆ. “ಈ ಚಿತ್ರವು ಕಾಂಗ್ರೆಸ್ ರಾಜಕೀಯದ ಸಂಕೇತವಾಗಿದೆ. ದೇಶದಲ್ಲಿ ಬೆಂಕಿ ಹೊತ್ತಿಸುತ್ತಿದೆ. ಈ ಹಿಂದೆ ಅವರು ಹಚ್ಚಿದ ಬೆಂಕಿ ಭಾರತದ ಬಹುತೇಕ ಭಾಗಗಳಲ್ಲಿ ಅವರನ್ನು ಸುಟ್ಟುಹಾಕಿದೆ. ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲೂ ಶೀಘ್ರದಲ್ಲೇ ಬೂದಿಯಾಗಲಿದೆ” ಎಂದು ಹೇಳಿದ್ದಾರೆ.
This picture is symbolic of Congress politics – of lighting fires in the country.
Fires they lit in the past has burnt them in most of India.
The remaining embers in Rajasthan & Chattisgrah will also reduce to ashes very soon.
Save this tweet. https://t.co/28qbFvKkbI
— Tejasvi Surya (@Tejasvi_Surya) September 12, 2022
“ಸಿಟಿ ರವಿಗೆ ಲೂಟಿ ರವಿ ಎಂದಿದ್ದು ಚೇಳು ಕಚ್ಚಿದಂತಾಗಿದೆ “: ದಿನೇಶ್ ಗುಂಡೂರಾವ್