ರಾಜ್ಯ ರಾಜಕೀಯದ ನವೆಂಬರ್ ಕ್ರಾಂತಿ ಒಂದೆಡೆಯಾದ್ರೆ, ಮತ್ತೊಂದೆಡೆ ಆರ್‌ಎಸ್‌ಎಸ್ ಕಿಚ್ಚು ಧಗಧಗಿಸ್ತಿದೆ. ನವೆಂಬರ್ 2ರಂದು RSS ಪಥಸಂಚಲನಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಅನುಮತಿ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಾಳೆ ನಡೆಯುತ್ತಿದೆ. ಮತ್ತೊಂದು ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ನವೆಂಬರ್ 2ರಂದು ತಮಗೂ ಮೆರವಣಿಗೆ ಮತ್ತು ಪಥಸಂಚಲನಕ್ಕೆ ಅನುಮತಿ ನೀಡುವಂತೆ, ಇತರೆ 5 ಸಂಘಟನೆಗಳು ಅರ್ಜಿ ಸಲ್ಲಿಸಿವೆ.
100 ವರ್ಷ ಹಿನ್ನೆಲೆ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಮುಂದಾಗಿತ್ತು. ಆ ವೇಳೆ ಪ್ರಿಯಾಂಕ್ ಖರ್ಗೆ ಮನವಿ ಮೇರೆಗೆ ಸರ್ಕಾರಿ ಜಾಗಗಳಲ್ಲಿ, ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯಗೊಳಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದ್ರಿಂದ ಕೆಂಡಾಮಂಡಲರಾಗಿದ್ದ ಆರ್‌ಎಸ್‌ಎಸ್ – ಬಿಜೆಪಿಗರು, ರಾಜ್ಯಾದ್ಯಂತ ಪಥಸಂಚಲನ ಹಮ್ಮಿಕೊಂಡಿದ್ರು. ಆದ್ರೆ ಚಿತ್ತಾಪುರದಲ್ಲಿ ಅನುಮತಿ ನೀಡಿರಲಿಲ್ಲ. ಇದನ್ನ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ರು.
ಇದೀಗ ನವೆಂಬರ್ 2ರಂದೇ ತಮಗೂ ಅನುಮತಿ ನೀಡುವಂತೆ, ಒಂದಲ್ಲ ಎರಡಲ್ಲ.. ಬರೋಬ್ಬರಿ 5 ಸಂಘಟನೆಗಳು ಮನವಿ ಮಾಡಿವೆ. ಭೀಮ್ ಆರ್ಮಿ, ಕುರುಬ ಸಂಘಟನೆ, ಕ್ರೈಸ್ತ ಸಮುದಾಯ, ರೈತ ಸಂಘ, ಹಸಿರು ಸೇನೆ, ಬೇರೆ ಬೇರೆ ಕಾರಣಗಳೊಂದಿಗೆ, ಪ್ರತಿಭಟನಾ ಮೆರವಣಿಗೆಗೆ ಸಜ್ಜಾಗಿವೆ. ಆರ್‌ಎಸ್‌ಎಸ್ ಸೇರಿ ಒಟ್ಟು 6 ಸಂಘಟನೆಗಳು ಒಂದೇ ದಿನ ಪಥಸಂಚಲನಕ್ಕೆ ಮನವಿ ಮಾಡಿದೆ.
ಇದು ಜಿಲ್ಲಾಡಳಿತ, ತಾಲೂಕು ಆಡಳಿತಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿವೆ.
ನಾಳೆ ಕಲಬುರಗಿ ಹೈಕೋರ್ಟ್ ಪೀಠದಲ್ಲಿ RSS ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಅರ್ಜಿಗಳ ಬಗ್ಗೆ ಜಿಲ್ಲಾಡಳಿತ ಯಾವ ರೀತಿಯ ವರದಿ ಸಲ್ಲಿಸುತ್ತೆ ಮತ್ತು ಅಂತಿಮವಾಗಿ ಯಾರಿಗೆ ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅವಕಾಶ ಸಿಗಲಿದೆ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ.