Wednesday, November 26, 2025

Latest Posts

ಚಿತ್ತಾಪುರದಲ್ಲಿ ಪಥಸಂಚಲನಕ್ಕೆ RSS ಹೊಸ ಪ್ರಸ್ತಾವನೆ

- Advertisement -

ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಅನುಮತಿ ಸಿಕ್ತಿಲ್ಲ. RSS ಹಿಡಿದ ಹಠ ಬಿಡ್ತಿಲ್ಲ. ಈ ವಿಚಾರ ಹೈಕೋರ್ಟ್‌ ಮೆಟ್ಟಿಲೇರಿದ್ದೂ ಆಯ್ತು. ಎರಡೆರಡು ಬಾರಿ ಶಾಂತಿ ಸಭೆ ನಡೆಸಿದ್ದು ಆಯ್ತು. ಸದ್ಯ, ನವೆಂಬರ್ 13 ಅಥವಾ 16ರಂದು ಚಿತ್ತಾಪುರದಲ್ಲಿ ಪಥ ಸಂಚಲನಕ್ಕೆ ಅನುಮತಿ ನೀಡುವಂತೆ, ಸರ್ಕಾರಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಹೊಸ ಪ್ರಸ್ತಾವನೆ ಸಲ್ಲಿಸಿದೆ.

ಪಥ ಸಂಚನಲಕ್ಕೆ ಅನುಮತಿ ನೀಡುವ ವಿಚಾರದ ಬಗ್ಗೆ ಹೈಕೋರ್ಟ್‌ ಸಲಹೆಯಂತೆ, ಅಡ್ವೊಕೇಟ್‌ ಜನರಲ್‌ ಕಚೇರಿಯಲ್ಲಿ ನಿನ್ನೆ ನಡೆದ ಸಭೆಯಲ್ಲಿ RSS ಪರ ವಕೀಲರು ಈ ಪ್ರಸ್ತಾವ ಮಂಡಿಸಿದ್ದಾರೆ. ಈ ಮನವಿಗೆ ಸಂಬಂಧಿಸಿದಂತೆ ಸರ್ಕಾರ ಅನುಮತಿ ನೀಡುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಸಭೆಯಲ್ಲಿ ಕೈಗೊಂಡ ತೀರ್ಮಾನದ ಕುರಿತಂತೆ ಅಡ್ವೊಕೇಟ್‌ ಜನರಲ್‌ ನವೆಂಬರ್​ 7ರಂದು ಹೈಕೋರ್ಟ್‌ಗೆ ವರದಿ ಸಲ್ಲಿಸಲಿದ್ದಾರೆ.

50 ಗಣವೇಷಧಾರಿಗಳು ಮಾತ್ರ ಪಥಸಂಚಲನದಲ್ಲಿ ಭಾಗವಹಿಸುತ್ತಾರೆ. 3.1 ಕಿಲೋ ಮೀಟರ್‌ ಪಥಸಂಚಲನ ನಡೆಸಲಾಗುತ್ತೆ. 4 ಸಾಲಿನ ಬದಲು 3 ಸಾಲಿನಲ್ಲಿ ಹೋಗುತ್ತೇವೆ. ಮಧ್ಯಾಹ್ನ 3ರಿಂದ ಸಂಜೆ 6.30ರವರೆಗೆ ಪಥಸಂಚಲನಕ್ಕೆ ಅನುಮತಿ ಕೊಡಿ ಎಂದು ಕೇಳಿದ್ದಾರೆ. ಅರ್ಜಿದಾರರು ಸಲ್ಲಿಸಿರುವ ಪ್ರಸ್ತಾವನೆ ಬಗ್ಗೆ ಜಿಲ್ಲಾಡಳಿತ ತೀರ್ಮಾನಿಸಬೇಕಿದೆ. ಪಥಸಂಚಲನದಲ್ಲಿ ಸ್ಥಳೀಯರಿಗೆ ಮಾತ್ರ ಅವಕಾಶ ನೀಡುವುದಾಗಿಯೂ ತಿಳಿಸಿದ್ದಾರೆ.

ಹೈಕೋರ್ಟ್​ ಸೂಚನೆ ಮೇರೆಗೆ ಅಕ್ಟೋಬರ್ 28ರಂದು, ಕಲಬುರಗಿಯಲ್ಲಿ ಶಾಂತಿ ಸಭೆ ನಡೆಸಲಾಗಿತ್ತು. ḑc, sp ನೇತೃತ್ವದಲ್ಲಿ 10 ಸಂಘಟನೆಗಳ ಜತೆ ನಡೆದ ಶಾಂತಿಸಭೆ ವಿಫಲವಾಗಿತ್ತು. ಹೈಕೋರ್ಟ್​ ಅಂತಿಮವಾಗಿ ನವೆಂಬರ್ 5ರಂದು ಬೆಂಗಳೂರಿನ‌ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ಮತ್ತೊಂದು ಶಾಂತಿ ನಡೆಸಲು ಸೂಚಿಸಿ, ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿತ್ತು.

- Advertisement -

Latest Posts

Don't Miss