Thursday, July 31, 2025

Latest Posts

Caste Census: ಜಾತಿಗಣತಿಗೆ ಆರ್​ಎಸ್​ಎಸ್​ ಬೆಂಬಲ: ‘ಕೈ’ ಗ್ಯಾರಂಟಿಯನ್ನ ಹೈಜಾಕ್​ ಮಾಡುತ್ತಿದೆಯಾ ಬಿಜೆಪಿ?

- Advertisement -

ನವದೆಹಲಿ: ಬಹು ಚರ್ಚಿತ ಜಾತಿ ಗಣತಿ (Caste Census)ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)​ ಬೆಂಬಲ ಸೂಚಿಸಿದ್ದು, ಕಾಂಗ್ರೆಸ್​ನ ಜಾತಿ ಗಣತಿ ಗ್ಯಾರಂಟಿಯನ್ನು ಬಿಜೆಪಿ ಹೈಜಾಕ್​ ಮಾಡುತ್ತಿದೆಯಾ..? ಇಂಥದ್ದೊಂದು ಪ್ರಶ್ನೆ ಸದ್ಯ ಎಲ್ಲರಲ್ಲೂ ಮೂಡಿದೆ. ಚುನಾವಣಾ ಲಾಭಕ್ಕಾಗಿ ಜಾತಿ ಗಣತಿಯನ್ನು ಮಾಡಬಾರದು. ಬದಲಿಗೆ ಜನರ ಒಳಿತಿಗಾಗಿ ಜಾತಿ ಗಣತಿ ನಡೆಯಬೇಕು ಎನ್ನುವ ಮೂಲಕ ಆರ್​ಎಸ್​ಎಸ್​ ಜಾತಿ ಗಣತಿಗೆ ಬೆಂಬಲ ಸೂಚಿಸಿದೆ..

ದೇಶವ್ಯಾಪಿ ಜಾತಿ ಗಣತಿ ನಡೆಸುವಂತೆ ಕಾಂಗ್ರೆಸ್​ ನೇತೃತ್ವದ I.N.D.I.A ಒಕ್ಕೂಟ ಕೇಂದ್ರ ಸರ್ಕಾರವನ್ನ ಒತ್ತಾಯಿಸುತ್ತಿರೋ ಹೊತ್ತಿನಲ್ಲೇ ಜಾತಿ ಗಣತಿಗೆ ಆರ್​ಎಸ್​ಎಸ್​ ಬೆಂಬಲ ಸೂಚಿಸಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕೇರಳದ ಪಾಲಕ್ಕಾಡ್​ನಲ್ಲಿ ನಡೆದ ಸಮನ್ವಯ ಬೈಠಕ್​ನಲ್ಲಿ ಮಾತ್ನಾಡಿದ ಆರ್​ಎಸ್​ಎಸ್​ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್, ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಬೇಡ. ಜನರ ಅಭಿವೃದ್ಧಿಗಾಗಿ ಪ್ರತಿಯೊಂದು ಜಾತಿಯ ಜನರ ಸಂಖ್ಯೆಯನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಜಾತಿ ಗಣತಿಯ ದತ್ತಾಂಶಗಳು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆಯಾಗಬೇಕೆ ಹೊರತು ಚುನಾವಣೆ ಲಾಭಕ್ಕೆ ದುರ್ಬಳಕೆಯಾಗಬಾರದು ಎಂದು ಎಚ್ಚರಿಸಿದ್ದಾರೆ.

ಇದು ನಮ್ಮ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ತುಂಬಾ ಮುಖ್ಯವಾಗಿದೆ. ಇದನ್ನು ಬಹಳ ಗಂಭೀರವಾಗಿ ವ್ಯವಹರಿಸಬೇಕು. ಕೆಲವೊಮ್ಮೆ ಸರ್ಕಾರಕ್ಕೆ ಜಾತಿಯ ಜನರ ಸಂಖ್ಯೆಗಳ ಅಗತ್ಯವಿರುತ್ತದೆ ಮತ್ತು ಈ ಹಿಂದೆ ಇದೇ ರೀತಿಯ ಜಾತಿ ಗಣತಿಯನ್ನು ಮಾಡಲಾಗಿದೆ. ಯಾವುದೇ ಕಾರಣಕ್ಕೂ ಜಾತಿ ಗಣತಿ ಎಂಬುದು ರಾಜಕೀಯ ಅಸ್ತ್ರವಾಗಬಾರದು ಎಂದು ಆರ್‌ಎಸ್‌ಎಸ್ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ತಿಳಿಸಿದ್ದಾರೆ.

RSSವಿರುದ್ಧ ‘ಕೈ’ ನಾಯಕ ಜೈರಾಮ್​ ರಮೇಶ್​ ಕಿಡಿ
ಜಾತಿಗಣತಿ ಕುರಿತ ಆರ್​ಎಸ್​ಎಸ್​ ಹೇಳಿಕೆಗೆ ಕಾಂಗ್ರೆಸ್​ ನಾಯಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಕಾಂಗ್ರೆಸ್​ ನಾಯಕ ಜೈರಾಮ್ ರಮೇಶ್, ಜಾತಿಗಣತಿ ಕುರಿತು ಆರ್​ಎಸ್​ಎಸ್​ ನೀಡಿರುವ ಉಪದೇಶಗಳು ಕೆಲ ಮೂಲಭೂತ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ. ಜಾತಿ ಗಣತಿಗೆ ಅನುಮತಿ ನೀಡಲು ಆರ್​ಎಸ್​ಎಸ್​​ ಯಾರು..? ಜಾತಿ ಗಣತಿಯನ್ನು ಚುನಾವಣಾ ಪ್ರಚಾರಕ್ಕೆ ದುರುಪಯೋಗಪಡಿಸಿಕೊಳ್ಳಬಾರದು ಎಂದು ಆರ್​ಎಸ್​ಎಸ್​ ಹೇಳುತ್ತದೆಯೇ..? ಎಂದು ಪ್ರಶ್ನಿಸಿದ್ದಾರೆ.

- Advertisement -

Latest Posts

Don't Miss