Saturday, April 19, 2025

Latest Posts

ಋಷಿ ಪತ್ನಿಯಾದ ಶ್ರೀರಾಮನ ಸೋದರಿ :

- Advertisement -

Devotional story:

ನಮಗೆಲ್ಲಾ ತಿಳಿದಿರುವಹಾಗೆ ದಶರಥ ಮಹಾರಾಜರಿಗೆ ಮೂವರು ಹೆಂಡತಿಯರು ಹಾಗು ನಾಲ್ವರು ಮಕ್ಕಳು ,ನಾಲ್ವರು ಮಕ್ಕಳಲ್ಲಿ ಕೌಸಲ್ಯ ದೇವಿಗೆ ಜನಿಸಿದವರು ಶ್ರೀರಾಮಚಂದ್ರ ,ಸುಮಿತ್ರಾ ದೇವಿಯ ಮಕ್ಕಳು ಲಕ್ಷ್ಮಣ ಹಾಗೂ ಶತ್ರುಘ್ನ, ಕೈಕೆಯಿ ಮಗ ಭರತ ಆದರೆ ಇವರನ್ನು ಹೊರತುಪಡಿಸಿ ದಶರಥ ಮಹಾರಾಜನಿಗೆ ಮತ್ತೊಬ್ಬಳು ಮಗಳು ಇದ್ದಳು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ ಅವಳು ಶ್ರೀರಾಮಚಂದ್ರನ ಸಹೋದರಿ ಎನ್ನಲಾಗಿದೆ. ಕೌಸಲ್ಯ ದೇವಿಗೆ ಶ್ರೀರಾಮಚಂದ್ರರಲ್ಲದೆ ಒಬ್ಬ ಮಗಳು ಇದ್ದಳು ಆಕೆಯ ಹೆಸರು ಶಾಂತ ಎಂದಾಗಿತ್ತು ಆಕೆ ಬಹಳ ಸುಂದರಿಯಾಗಿದ್ದಳು ,ರಾಜಕುಮಾರಿಯಾಗುವ ಎಲ್ಲ ಹರ್ಹತೆ ಅವಳಿಗೆ ಇತ್ತು .ಒಮ್ಮೆ ಅಂಗದೇಶದ ರಾಜ ಲೊಂಪದ ಹಾಗೂ ಪತ್ನಿ ವರ್ಷಿಣಿಗೆ ಮಕ್ಕಳಿಲ್ಲದ ಕಾರಣ ದಶರಥ ಮಹಾರಾಜನ ಬಳಿ ಬಂದು ನಿನ್ನ ಮಗಳನ್ನು ನಾವು ದತ್ತು ತೆಗೆದುಕೊಳ್ಳುತ್ತೇವೆ ಎಂದು ಕೇಳಿದರು ಆಗ ದಶರಥ ಮಹಾರಾಜ ಮಗಳನ್ನು ಲೊಂಪದ ಆಗು ಪತ್ನಿ ವರ್ಷಿಣಿಗೆ ದತ್ತು ನೀಡಿದರು .

ಆದರ ನಂತರ ದಶರಥನಿಗೆ ಮಕ್ಕಳಾಗುವುದಿಲ್ಲ ತನ್ನ ನಂತರ ಉತ್ತರಾಧಿಕಾರಿಯಾಗಿ ರಾಜ್ಯ ನಡೆಸಲು ವಂಶೋದ್ದಾರಕ್ಕಾಗಿ ಒಬ್ಬ ಮಗ ಬೇಕು ಎಂಬ ಆಸೆ ಇಂದ ಸುಮಿತ್ರಾ, ಕೈಕೇಯಿಯರನ್ನು ಮದುವೆಯಾಗುತ್ತಾರೆ ವರ್ಷಗಳು ಉರುಳಿತು ಆದರೂ ಸಹ ದಶರಥನಿಗೆ ಮಕ್ಕಳಾಗುವುದಿಲ್ಲ ಹೀಗಾಗಿ ಚಿಂತೆಗೀಡಾದ ದಶರಥ ಮಹಾರಾಜ ಸಂತಾನಕ್ಕಾಗಿ ಯಜ್ಞಯಾಗಾದಿಗಳನ್ನು ಮಾಡಲು ವಸಿಷ್ಟರ ಮೊರೆಹೋಗುತ್ತಾರೆ .

ಆಗ ವಸಿಷ್ಠರು ತಂದೆಯ ಹೊರತಾಗಿ ಬೇರೆ ಮನುಷ್ಯನ ಸಂಪರ್ಕವೇ ಇಲ್ಲದ ಋಷ್ಯಶೃಂಗ ಮಹರ್ಷಿ ಮಾತ್ರ ಪುತ್ರಕಾಮೇಷ್ಠಿ ಯಾಗ ಮಾಡಲು ಸಾಧ್ಯ ಎಂದು ಸಲಹೆ ನೀಡಿದರು .ವಸಿಷ್ಠರ ಮಾತಿನಂತೆ ಪುತ್ರಕಾಮೇಷ್ಠಿಯಾಗ ಮಾಡಲು ಮುಂದಾದ ದಶರಥ ಮಹಾರಾಜನಿಗೆ ಋಷ್ಯಶೃಂಗ ಮಹರ್ಷಿಗಳನ್ನು ಹೇಗೆ ತಮ್ಮ ರಾಜ್ಯಕ್ಕೆ ಕರೆತರುವುದು ಎಂದು ತಿಳಿಯುವುದಿಲ್ಲ ,ನಂತರ ವಶಿಷ್ಠರು ಹೀಗೆ ಸಲಹೆ ನೀಡುತ್ತಾರೆ ಋಶ್ಯಶೃಂಗರಿಗೆ ವಿವಾಹ ಮಾಡಿಸಿ ಕೌಟುಂಬಿಕ ಜೀವನಕ್ಕೆ ತಂದು ಅವರಿಂದ ಪುತ್ರಕಾಮೇಷ್ಠಿ ಯಾಗ ಮಾಡಿಸಿ ನಿಮಗೆ ಪುತ್ರರ ಜನನವಾಗುತ್ತದೆ ಎಂದು ಹೇಳುತ್ತಾರೆ. ಮಹರ್ಷಿಗಳ ಸಲಹೆಯ ಮೇರೆಗೆ ದಶರಥ ಋಷ್ಯಶೃಂಗರ ಬಳಿ ಹೋಗಿ ತನ್ನ ಮಗಳಾದ ಶಾಂತಾಳನ್ನು
ಮದುವೆಯಾಗುವಂತೆ ಕೇಳಿಕೊಳ್ಳುತ್ತಾನೆ, ಎಂದೂ ಮಹಿಳೆಯನ್ನೇ ನೋಡಿರದ ಋಷ್ಯಶೃಂಗರು ಶಾಂತಾಳ ರೂಪ ಹಾಗೂ ಬುದ್ಧಿವಂತಿಕೆಗೆ ಮನಸೋತು ವಿವಾಹವಾಗುತ್ತಾನೆ. ನಂತರ ಋಷ್ಯಶೃಂಗರು ನಡೆಸಿದ ಯಾಗದಿಂದಾಗಿ ಕೌಸಲ್ಯೆಗೆ ರಾಮಾ, ಸುಮಿತ್ರಾಗೆ ಲಕ್ಷ್ಮಣ ಹಾಗೂ ಶತೃಘ್ನ, ಕೈಕೇಯಿಗೆ ಭರತ ಜನ್ಮಿಸುತ್ತಾರೆ ಹೀಗೆ ಶಾಂತಾಳ ತ್ಯಾಗದಿಂದ ದಶರಥನಿಗೆ ಗಂಡುಮಕ್ಕಳ ಜನನವಾಗುತ್ತದೆ.

ಶ್ರೀ ಕೃಷ್ಣನ ಮಗ ಸಾಂಬನ ಬಗ್ಗೆ ನಿಮಗೆಷ್ಟು ಗೊತ್ತು ?

ವಿಜಯದಶಮಿ ದಸೆರೆಗೆ ನೈವೇದ್ಯ ರೆಸಿಪಿ..

ನವರಾತ್ರಿಯ ಒಂಭತ್ತನೇಯ ದಿನದ ಪ್ರಸಾದ ರೆಸಿಪಿ..

- Advertisement -

Latest Posts

Don't Miss