Monday, May 12, 2025

Latest Posts

Gender : ರಷ್ಯಾದಲ್ಲಿ ಇನ್ನುಮುಂದೆ ಲಿಂಗ ಪರಿವರ್ತನೆ ಕಾನೂನು ಬಾಹಿರ

- Advertisement -

Russia News : ಲಿಂಗ ಪರಿವರ್ತನೆಗೆ ಸಂಬಂಧಿಸಿದ ವೈದ್ಯಕೀಯ ಚಿಕಿತ್ಸೆಗಳನ್ನು ಕಾನೂನುಬಾಹಿರಗೊಳಿಸುವ ಕಾನೂನಿಗೆ ಇದು ಪೂರಕವಾಗಿದೆ. ಮಕ್ಕಳ ಅಸಮರ್ಪಕ ಬೆಳವಣಿಗೆ ಮತ್ತು ಜನ್ಮ ದೋಷಗಳನ್ನು ಪರಿಹರಿಸಲು ಬಳಸುವ ವೈದ್ಯಕೀಯ ವಿಧಾನಗಳಿಗೆ ನಿರ್ಬಂಧವು ಅನ್ವಯಿಸುವುದಿಲ್ಲ.  ಲೈಂಗಿಕ ವ್ಯತ್ಯಾಸದ ಬಾಲ್ಯದ ಅಸ್ವಸ್ಥತೆಗಳಿಗೆ ಸಂಬಂಧಿಸಿದ ಆನುವಂಶಿಕ ಮತ್ತು ಅಂತಃಸ್ರಾವಕ ಸಮಸ್ಯೆಗಳಿಗೆ ಅನ್ವಯಿಸುವುದಿಲ್ಲ ಎಂದು ರಷ್ಯಾದ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ ಎನ್ನಲಾಗಿದೆ.

ಕಾನೂನಿನ ಮುಖ್ಯ ಗುರಿಯು, ರಷ್ಯಾ ಸಮಾಜದ ಸಾಂವಿಧಾನಿಕ ನೈತಿಕ ತತ್ವಗಳು ಮತ್ತು ಕೌಟುಂಬಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು. ದೇಶದ ಜನರ ಆರೋಗ್ಯವನ್ನು, ಅದರಲ್ಲೂ ವಿಶೇಷವಾಗಿ ಮಕ್ಕಳ ಆರೋಗ್ಯವನ್ನು ಕಾಪಾಡುವುದಾಗಿದೆ ಎನ್ನಲಾಗಿದೆ.

ಈ ಕಾನೂನು ಅಂಗೀಕಾರವಾದ ದಿನದಿಂದಲೇ ಜಾರಿಗೆ ಬರುತ್ತದೆ. ಈಗಾಗಲೇ ಲಿಂಗ ಬದಲಾಯಿಸಿಕೊಂಡಿರುವವರಿಗೆ ಈ ಕಾನೂನು ಅನ್ವಯವಾಗುವುದಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ರಷ್ಯಾದಲ್ಲಿ ಹೊಸ ಐಉಃಖಿಕಿ ವಿರೋಧಿ ಕಾನೂನುಗಳ ಭಾಗವಾಗಿ ಲಿಂಗ ಪರಿವರ್ತನೆಗೆ ಶಸ್ತ್ರಚಿಕಿತ್ಸೆ ಸೇರಿದಂತೆ ತೃತೀಯಲಿಂಗಿಗಳಿಗೆ ಎಲ್ಲಾ ವೈದ್ಯಕೀಯ ಸಹಾಯವನ್ನು ನಿಷೇಧಿಸುವ ಹೊಸ ಕಾನೂನನ್ನು ರಷ್ಯಾದ ಸ್ಟೇಟ್ ಡುಮಾ ಅಥವಾ ಸಂಸತ್ತಿನ ಕೆಳಮನೆಯು ಜು.14 ರಂದು ಅನುಮೋದಿಸಿದೆ.

- Advertisement -

Latest Posts

Don't Miss