ಪಂಚಭೂತಗಳಲ್ಲಿ ಲೀನವಾದ ಎಸ್.ಎಂ.ಕೃಷ್ಣ: ಇಷ್ಟದ ಜಾಗದಲ್ಲೇ ಅಂತ್ಯಸಂಸ್ಕಾರ

Political News: ಮಾಜಿ ಸಿಎಂ, ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ನಿನ್ನೆ ವಯೋಸಹಜ ಖಾಯಿಲೆಯಿಂದ ಬಳಲಿ ನಿಧರಾಗಿದ್ದರು. ಇಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಕಾಫಿ ಡೇ ಇರುವ ಸ್ಥಳದಲ್ಲೇ ಎಸ್.ಎಂ.ಕೃಷ್ಣ ಅವರ ಅಂತ್ಯಸಂಸ್ಕಾರ ನೆರವೇರಿತು.

ಈ ಜಾಗ ಎಸ್‌.ಎಂ.ಕೃಷ್ಣ ಅವರ ನೆಚ್ಚಿನ ಜಾಗವಾಗಿದ್ದ ಕಾರಣ, ಅವರ ತೊನೆಯ ಕಾರ್ಯವನ್ನು ಇಲ್ಲೇ ಮಾಡಲಾಯಿತು. ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆದಿದ್ದು, ಸಕಲ ಸರ್ಕಾರಿ ಗೌರವ ಅರ್ಪಿಸಲಾಯಿತು. ಹಲವು ರಾಜಕೀಯ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಕುಮಾರಸ್ವಾಮಿ, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜಿ.ಪರಮೇಶ್ವರ್, ಶ್ರೀ ನಿಜಗುಣಾನಂದ ಸ್ವಾಮೀಜಿ ಸೇರಿ ಹಲವು ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದು, ಅಂತ್ಯಸಂಸ್ಕಾರದಲ್ಲಿ ಭಾಗಿಯಾದರು.

ಎಸ್.ಎಂ.ಕೃಷ್ಣ ಅವರ ಅಂತ್ಯಸಂಸ್ಕಾರಕ್ಕೆ ಬರೀ ಗಣ್ಯರಿಗಷ್ಟೇ ಅಲ್ಲದೇ, ಮದ್ದೂರಿನ ಎಲ್ಲ ಜನರಿಗೂ ಬರುವ ಅವಕಾಶವಿತ್ತು. ಹಾಗಾಗಿ ಮದ್ದೂರು, ಮಂಡ್ಯದ ಹಲವು ಅಭಿಮಾನಿಗಳು, ತಮ್ಮ ನೆಚ್ಚಿನ ನಾಯಕನ ಕೊನೆಯಶ್ರ ಕ್ಷಣಗಳಿಗೆ ಸಾಕ್ಷಿಯಾಗಿ, ಕಂಬನಿ ಮಿಡಿದಿದ್ದಾರೆ.

About The Author