ಪೊಲೀಸರೆದುರೇ ಚರಂಡಿ ನೀರು ಸುರಿದುಕೊಂಡ ಮಹಿಳೆ…!

www.karnatakatv.net :ರಾಯಚೂರು: ಗುರುತಿನ ಚೀಟಿ ನೀಡಿಲ್ಲ ಅನ್ನೋ ಕಾರಣಕ್ಕೆ ಮಹಿಳೆಯೊಬ್ಬರು ಚರಂಡಿ ನೀರನ್ನು ಸುರಿದುಕೊಳ್ಳೋ ಮೂಲಕ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ರಾಯಚೂರಲ್ಲಿ ನಡೆದಿದೆ. 

ರಾಯಚೂರಿನ ಸಫಾಯಿ ಕರ್ಮಚಾರಿಗಳು ಇಂದು ತಮಗೆ ಗುರುತಿನ ಚೀಟಿ ನೀಡಬೇಕು ಅಂತ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿದ್ರು. ಈ ವೇಳೆ ಪ್ರತಿಭಟನಾನಿರತ ಮಹಿಳೆ ಗೀತಾ ಸಿಂಗ್ ಮೈಮೇಲೆ ಚರಂಡಿ ನೀರು ಸುರಿದುಕೊಂಡ್ರು. ಇನ್ನು ಸ್ಥಳದಲ್ಲಿ ಹಾಜರಿದ್ದ ಪೊಲೀಸರೂ ಕೂಡ ತಡೆಯಲು ಯತ್ನ ನಡೆಸಿದ್ರೂ ಪಟ್ಟು ಬಿಡದ ಆಕೆ ಮಲಿನ ನೀರನ್ನು ಸುರಿದುಕೊಂಡಿದ್ದಾರೆ. 

ಇನ್ನು ಸುದ್ದಿ ತಿಳಿದ ಜಿಲ್ಲಾಧಿಕಾರಿ ಕೂಡಲೇ   ಸಫಾಯಿ ಕರ್ಮಚಾರಿಗಳ ತುರ್ತು ಸಭೆ ಕರೆದು ಅವರ ಕುಂದುಕೊರತೆ ಆಲಿಸಿದ್ರು. ಅಲ್ಲದೆ 80 ಮಂದಿ ಸಫಾಯಿ ಕರ್ಮಚಾರಿಗಳಿಗೆ ಗುರುತಿನ ಚೀಟಿ ನೀಡುವ ಕುರಿತು ಪಿಡಿಒಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಬಿ.ಸತೀಶ್ ಸೂಚನೆ ನೀಡಿದ್ದಾರೆ.

ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು

About The Author