2022ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರ ಪಟ್ಟಿ ಪ್ರಕಟ: ಕನ್ನಡದ ದಾದಾಪೀರ್ ಜೈಮನ್, ತಮ್ಮಣ್ಣ ಬೀಗಾರಗೆ ಪ್ರಶಸ್ತಿ

ನವದೆಹಲಿ: ಕೇಂದ್ರ ಸರ್ಕಾರದ ಸಾಹಿತ್ಯ ಅಕಾಡೆಮಿಯಿಂದ ಕೊಡ ಮಾಡುವಂತ 2022ನೇ ಸಾಲಿನ ಯುವ ಸಾಹಿತ್ಯ ಪ್ರಶಸ್ತಿ ಹಾಗೂ ಬಾಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಕರ್ನಾಟಕದ ಇಬ್ಬರು ಸಾಹಿತಿಗಳು ಈ ಬಾರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

2022ನೇ ಸಾಲಿನ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಯುವ ಸಾಹಿತ್ಯ ಪ್ರಶಸ್ತಿಯನ್ನು ದಾದಾಪೀರ್ ಜೈಮನ್ ಅವರ ನೀಲಕುರಿಂಜಿ ಕಥಾ ಸಂಕಲನಕ್ಕೆ ನೀಡಲಾಗಿದೆ. ಬಾಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಮ್ಮಣ್ಣ ಬೀಗಾರ ಅವರ ಬಾವಲಿ ಗುಹೆ ಎನ್ನುವಂತ ಮಕ್ಕಳ ಕಾದಂಬರಿಗೆ ನೀಡಲಾಗಿದೆ.

About The Author