State News:
Feb:24: ಕುಂದಾನಗರಿ ಬೆಳಗಾವಿಯಲ್ಲಿ ಮತ್ತೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಾಹುಕಾರ್ ರಮೇಶ್ ಜಾರಕಿಹೊಳಿ ನಡುವೆ ವಾರ್ ಶುರುವಾಗಿದೆ. ಟಾಕ್ ವಾರ್ ಗಳು ತಟಸ್ಥವಾಗುತ್ತಿದ್ದಂತೆ ಇದೀಗ ಪ್ರತಿಮೆ ಸಂಘರ್ಷ ಪ್ರಾರಂಭವಾಗಿದೆ. ಬೆಳಗಾವಿಯಲ್ಲಿ ಮರಾಠಿಗರು ಅಧಿಕವಿರುವ ಕಾರಣದಿಂದಾಗಿ ಇಬ್ಬರೂ ಕೂಡಾ ಮತವೊಲಿಸುವ ಪ್ಲಾನ್ ಮಾಡುತ್ತಿದ್ದಾರೆ. ಸರಕಾರದಿಂದಲೇ ಪ್ರತಿಮೆ ಅನಾವರಣವಾಗಬೇಕೆಂದು ಸಾಹುಕಾರ್ ಸತತವಾಗಿ ಶ್ರಮಿಸುತ್ತಿದ್ದರೆ ಇತ್ತ ಹೆಬ್ಬಾಳ್ಕರ್ ನಮ್ಮ ಪಕ್ಷದ ಮೂಲಕ ಮೂರ್ತಿ ತೆರೆದುಕೊಳ್ಳಲಿ ಎಂದು ಹರ ಸಾಹಸಪಡುತ್ತಿದ್ದಾರೆ. ಈ ಕಾರಣದಿಂದಲೇ ಸರಕಾರದ ಕಾರ್ಯಕ್ರಮದ ನಂತರ ಪ್ರತ್ಯೇಕ ಕಾರ್ಯಕ್ರಮ ಆಯೋಜಿಸಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಸೇರಿ ಈ ಕಾರ್ಯಕ್ರಮದಲ್ಲಿ ಅನೇಕ ನಾಯಕರು ಕಾಣಿಸಿಕೊಳ್ಳಲಿದ್ದಾರೆ. ಮಾರ್ಚ್ 5 ರಂದು ಈ ಕಾರ್ಯಕ್ರಮ ಆಯೋಜಿಸುವ ನಿರ್ಧಾರ ಮಾಡಿದ್ದಾರೆ. ಆದರೆ ಮತ್ತೊಂದೆಡೆ ಸಾಹುಕಾರ್ ರಮೇಶ್ ಜಾರಕಿಹೊಳಿ ಮಾರ್ಚ್ 2ರಂದೇ ಸರಕಾರದ ಕಾರ್ಯಕ್ರಮ ಮಾಡುವ ಯೋಜನೆ ಮಾಡಿ ಸಿಎಂ ಮೂಲಕವೇ ಪ್ರತಿಮೆ ಅನಾವರಣ ಮಾಡಲು ನಿರ್ಧಾರ ಮಾಡಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಮಾನದಂಡವಾಗಿಯೇ ಇರಿಸಿಕೊಂಡು ಇಬ್ಬರ ನಡುವೆಯೂ ಇದೀಗ ಪ್ರತಿಮೆ ಜಟಾಪಟಿ ನಡೆಯುತ್ತಿದೆ.
ಪ್ರಚಾರದ ವೇಳೆ ಕಾರ್ಯಕರ್ತರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರೇವಣ್ಣ ಕುಟುಂಬ

