www.karnatakatv.net :2019 ನೇ ಸಾಲಿನ ಸೈಮಾ ಪ್ರಶಸ್ತಿಯಲ್ಲಿ ಯಜಮಾನ ಚಿತ್ರಕ್ಕೆ ಅನೇಕ ಪ್ರಶಸ್ತಿಗಳು ಲಭ್ಯವಾಗಿದ್ದು, ಯಜಮಾನ ಸಿನಿಮಾದ ನಟನೆಗೆ ಅತ್ಯಯತ್ತಮ ನಟ ಪ್ರಶಸ್ತಿಯನ್ನು ನಟ ದರ್ಶನ್ ಗೆ ಕೊಡಲಾಗಿದೆ.
ಹೌದು ನಿನ್ನೆ ನಡೆದ ಸೈಮಾ ಪ್ರಶಸ್ತಿಯಲ್ಲಿ ಕನ್ನಡ ವಿಭಾಗಕ್ಕೆ ಅತಿ ಹೆಚ್ಚು ಪ್ರಶಸ್ತಿಯನ್ನು ಯಜಮಾನ ಚಿತ್ರವು ತಂದುಕೊಟ್ಟಿದೆ. ಹಾಗೆ ಅತ್ಯುತ್ಯಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಯಜಮಾನ ಸಿನಿಮಾಕ್ಕಾಗಿ ಹರಿಕೃಷ್ಣ ಪಡೆದುಕೊಂಡಿದ್ದಾರೆ. ಅತ್ಯುತ್ಯಮ ಹಾಸ್ಯನಟ ಪ್ರಶಸ್ತಿಯನ್ನು ಕೂಡಾ ಯಜಮಾನ ಸಿನಿಮಾಕ್ಕಾಗಿ ಸಾಧುಕೋಕಿಲಾ ಪಡೆದುಕೊಂಡಿದ್ದಾರೆ. ಅತ್ಯತ್ತಮ ಸಿನಿಮಾ ಪ್ರಶಸ್ತಿಯು ಯಜಮಾನ ಸಿನಿಮಾದ ಪಾಲಾಗಿದೆ.
ಅತ್ಯುತ್ತಮ ನಟ, ಪೋಷಕ ನಟ, ಹಾಸ್ಯ ನಟ, ಸಂಗೀತ ನಿರ್ದೇಶನ ಸೇರಿದಂತೆ ಒಟ್ಟು 8 ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ತಮ್ಮ ಚೊಚ್ಚಲ ಸಿನಿಮಾಗೆ ಪ್ರಶಸ್ತಿಗಳ ಸುರಿಮಳೆಯಾಗಿರುವುದಕ್ಕೆ ನಿರ್ದೇಶಕ ಹರಿಕೃಷ್ಣ ಖುಷಿಯನ್ನ ವ್ಯಕ್ತಪಡಿಸಿದ್ದಾರೆ.