Thursday, October 16, 2025

Latest Posts

ಮಾಜಿ ಪತಿಯ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ ಎಂದು ಮನವಿ ಮಾಡಿದ ಸೈರಾಬಾನು

- Advertisement -

Bollywood News: ಕೆಲ ದಿನಗಳ ಹಿಂದಷ್ಟೇ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ತಮ್ಮ ಪತ್ನಿ ಸೈರಾಬಾನುಗೆ ವಿಚ್ಛೇದನ ನೀಡಿದ್ದರು. ಬಳಿಕ ಹಲವಾರು ಸುದ್ದಿ ಓಡಾಡಿತ್ತು. ರೆಹಮಾನ್‌ಗೆ ಅಫೇರ್ ಇದೆ ಅಂತಲೂ ಹೇಳಲಾಗಿತ್ತು. ರೆಹಮಾನ್ ಮತ್ತು ಸೈರಾ ಪುತ್ರ ಕೂಡ ತಮ್ಮ ತಂದೆಯ ಬಗ್ಗೆ ಇಲ್ಲಸಲ್ಲದ ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದರು.

ಆದ್ರೆ ರೆಹಮಾನ್ ಈ ರೀತಿ ಟ್ರೋಲ್ ಆಗಲು ಕಾರಣ, ಅವರದ್ದೇ ಟೀಂನಲ್ಲಿದ್ದ ಮೋಹಿನಿ ಡೇ ಎಂಬಾಕೆ. ಈಕೆ ಕೂಡ ಅದೇ ದಿನ ತಮ್ಮ ಪತಿಗೆ ವಿಚ್ಛೇದನ ಘೋಷಿಸಿದ್ದರು. ಹಾಗಾಗಿ ಇವರಿಬ್ಬರ ಮಧ್ಯೆ ಅಫೇರ್ ಇರಬೇಕು ಎಂಬ ಗುಸು ಗುಸು ಶುರುವಾಗಿತ್ತು. ಹಾಗಾಗಿ ರೆಹಮಾನ್ ಬಗ್ಗೆ ಜನ ಕೆಟ್ಟದಾಗಿ ಮಾತನಾಡಿಕೊಳ್ಳಲು ಶುರು ಮಾಡಿದ್ದರು.

ಇದೀಗ ಮಾಜಿ ಪತ್ನಿ ಸೈರಾ ಬಾನು ಕೂಡ ರೆಹಮಾನ್ ಬಗ್ಗೆ ಕೆಟ್ಟದ್ದನ್ನು ಮಾತನಾಡಬೇಡಿ ಎಂದು ಮನವಿ ಮಾಡಿದ್ದಾರೆ. ಸೈರಾ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರು ಕಳೆದ ಕೆಲ ದಿನಗಳಿಂದ ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪೂರ್ತಿಯಾದ ಬಳಿಕ ಸೈರಾ ಚೆನ್ನೈಗೆ ಹೋಗಲಿದ್ದಾರೆ. ಈ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಸೈರಾ ಜನರಲ್ಲಿ ಮನವಿ ಮಾಡಿದ್ದು, ರೆಹಮಾನ್ ವಜ್ರವಿದ್ದಂತೆ ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ. ಕೆಟ್ಟದಾಗಿ ಮಾತನಾಡಬೇಡಿ. ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ. ಅವರೂ ನನ್ನನ್ನು ತುಂಬ ಪ್ರೀತಿಸುತ್ತಾರೆ. ಹಾಗಾಗಿ ಅವರ ಹೆಸರು ಹಾಳು ಮಾಡಬೇಡಿ. ಇಂಥ ಮೂರ್ಖತನದ ಕೆಲಸ ಬೇಡ ಎಂದು ಸೈರಾ ಮನವಿ ಮಾಡಿದ್ದಾರೆ.

- Advertisement -

Latest Posts

Don't Miss