Health tips:
ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸಕ್ಕರೆ ಅತಿ ಕೆಟ್ಟ ಅಭ್ಯಾಸವೆನ್ನಬಹುದು ಸಕ್ಕರೆ ಒಂದು ರೀತಿಯಾದ ಸ್ಲೋ ಪಾಯಿಸನ್ ,ಇದರ ಸೇವನೆಯಿಂದ ಅತಿ ಹೆಚ್ಚು ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತದೆ ಹಾಗಿದ್ದರೆ, ಸಕ್ಕರೆ ಸೇವನೆ ಮಾಡಬಾರದೇ ಎಂಬ ಸಂದೇಹ ಕೆಲವರಲ್ಲಿ ಬರಬಹುದು ಆದರೆ ಎಷ್ಟು ಪ್ರಮಾಣದಲ್ಲಿ ಸಕ್ಕರೆ ಸೇವನೆ ಮಾಡಬೇಕು ಎಂಬುವುದು ಮುಖ್ಯವಾಗಿರುತ್ತದೆ.
ಮೊದಲು ನಿಮ್ಮ ದೇಹದ ತೂಕ ಹಾಗೂ ಎತ್ತರಕ್ಕೆ ಅನುಗುಣವಾಗಿ ಎಷ್ಟು ಕ್ಯಾಲೋರಿಸ್ ಸೇವಿಸಬೇಕು ಎಂದು ತಿಳಿದುಕೊಳ್ಳಬೇಕು .ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ದಿನಕ್ಕೆ 2 ಚಮಚದಷ್ಟು ಸಕ್ಕರೆ ಯನ್ನು ಮಾತ್ರ ನಾವು ಸೇವಿಸಬೇಕು ಅಂದ್ರೆ 10 ಗ್ರಾಂನಷ್ಟು ದೈನಂದಿನ ಜೀವನದಲ್ಲಿ ಸೇವಿಸುವ ಕ್ಯಾಲೋರಿಗಳು ಶೇ.5ರಷ್ಟು ಮೀರಬಾರದು.4 ರಿಂದ 6 ವರ್ಷ ವಯಸ್ಸಿನ ಮಕ್ಕಳು ದಿನಕ್ಕೆ 19 ಗ್ರಾಂ ಗಿಂತ ಹೆಚ್ಚು ಸಕ್ಕರೆ ಸೇವಿಸಬಾರದು. 7 ರಿಂದ 10 ವರ್ಷ ವಯಸ್ಸಿನ ಮಕ್ಕಳು 24 ಗ್ರಾಂ ಗಿಂತ ಹೆಚ್ಚಾಗಿ ಸಕ್ಕರೆ ತೆಗೆದುಕೊಳ್ಳಬಾರದು. ಪುರುಷರು ದಿನಕ್ಕೆ 9 ಟೀ ಚಮಚದಷ್ಟು (36 ಗ್ರಾಂ ಅಥವಾ 150 ಕ್ಯಾಲೋರೀಸ್) ಮಾತ್ರ ಸಕ್ಕರೆ ಪ್ರಮಾಣದ ಸೇವಿಸಬೇಕು. ಮಹಿಳೆಯರು 6 ಟೀ ಚಮಚ ಅಂದರೆ, 25 ಗ್ರಾಂ ಅಥವಾ 100 ಕ್ಯಾಲೋರಿಗಳಷ್ಟು ಮಾತ್ರ ಸಕ್ಕರೆ ಸೇವಿಸಬಹುದು ಎಂಬ ಮಾಹಿತಿ ಇದೆ. ಪ್ರಿಸರ್ವೇಟಿವ್ ಆಹಾರಗಳಲ್ಲಿ ಹೆಚ್ಚು ಸಕ್ಕರೆ ಪ್ರಮಾಣ ಇರಲಿದೆ, ಹೀಗಾಗಿ ಇಂಥ ಆಹಾರಗಳನ್ನು ಸಾಧ್ಯವಾದಷ್ಟು ನಿಯಂತ್ರಿಸಬೇಕು
ಸಕ್ಕರೆ ಯಾಕೆ ಆರೋಗ್ಯಕ್ಕೆ ಹಾನಿಕಾರಕ?
1.ಮಧುಮೇಹ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಸಕ್ಕರೆ ಅಂಶವನ್ನು ಸೇವನೆ ಮಾಡಬಾರದು. ನಿಮ್ಮ ಆಹಾರ ಪದ್ಧತಿಯಲ್ಲಿ ಸಕ್ಕರೆ ಅಂಶ ಹೆಚ್ಚಾದರೆ ಅದು ನೇರವಾಗಿ ನಿಮ್ಮ ಹೃದಯದ ಮೇಲೆ ಪ್ರಭಾವ ಬೀರುತ್ತದೆ.
2.ಸಕ್ಕರೆ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುವುದಿಲ್ಲ ಹೀಗಾಗಿ ಇದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಹಾಗು
ಸಕ್ಕರೆ ಪ್ರಮಾಣ ಜಾಸ್ತಿಯಾದರೆ ಲಿವರ್ ಮೇಲೆ ಹೆಚ್ಚು ಒತ್ತಡವಾಗುತ್ತದೆ ,ಸಕ್ಕರೆ ಪ್ರಮಾಣವು ಇನ್ಸುಲಿನ್ ಮೆಟಬಾಲಿಕ್ ಸಿಂಡ್ರೋಮ್ ಮತ್ತು ಮಧುಮೇಹಕ್ಕೆ ಕಾರಣವಾಗಬಹುದು ಹಾಗು ಕ್ಯಾನ್ಸರ್‌ಗೆ ತುತ್ತಾಗುವ ಅವಕಾಶವಿರುತ್ತದೆ. ಕೊಲೆಸ್ಟ್ರಾಲ್ ಹಾಗೂ ಮಕ್ಕಳಲ್ಲಿ, ವಯಸ್ಕರಲ್ಲಿ ಓಬೆಸಿಟಿಗೆ ಕಾರಣವಾಗಬಹುದು.ಹಾಗಾಗಿ ಸಕ್ಕರೆ ಪ್ರಮಾಣ ಎಷ್ಟು ಮಿತವಾಗಿರುತ್ತದೆಯೋ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ .
3.ಸಾಧ್ಯವಾದಷ್ಟು ನಾವು ಸಕ್ಕರೆ ಪ್ರಮಾಣ ಸೇವನೆ ಮಾಡುವುದನ್ನು ಕಡಿಮೆ ಮಾಡಿಕೊಂಡರೆ ಅತ್ಯುತ್ತಮ ಸೌಂದರ್ಯವನ್ನು ದೀರ್ಘ ಕಾಲ ನಮ್ಮದಾಗಿಸಿಕೊಳ್ಳಬಹುದು.
4.ಕೃತಕವಾದ ಸಕ್ಕರೆಯಂಶವನ್ನು ಬಳಕೆ ಮಾಡುವ ಬದಲು ನೈಸರ್ಗಿಕವಾದ ಸಕ್ಕರೆಯಂಶ ತುಂಬಿರುವ ಒಣ ದ್ರಾಕ್ಷಿ, ಹಣ್ಣುಗಳು ಇತ್ಯಾದಿಗಳನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಶಕ್ತಿ ಮತ್ತು ಚೈತನ್ಯ ಸಿಗುವುದು ಮಾತ್ರವಲ್ಲದೆ ಅತ್ಯುತ್ತಮವಾದ ಪ್ರೊಟೀನ್ ಅಂಶ ಕೂಡ ಸಿಗುತ್ತದೆ.
5.ನೀವು ಹೆಚ್ಚು ಸಕ್ಕರೆಯನ್ನು ಸೇವಿಸಿದರೆ ನಿಮ್ಮ ಮುಖದ ಮೇಲೆ ನೇರ ಪರಿಣಾಮ ಬಿದ್ದು ಮೊಡವೆ ಸಮಸ್ಯೆಗಳು ಉಂಟಾಗಬಹುದು.
6.ಅನೇಕ ಜನರು ಪ್ಯಾಕೇಜ್ ಮಾಡಿದ ಆಹಾರವನ್ನು ಸೇವಿಸುತ್ತಾರೆ, ಬಿಸ್ಕೆಟ್ , ಜ್ಯೂಸ್, ಕೇಕ್ಗಳಂತಹ ಪ್ರತಿಯೊಂದು ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿರುತ್ತದೆ ಇದು ದೇಹದಲ್ಲಿ ಕೆಟ್ಟ ಇನ್ಸುಲಿನ್ನ್ನು ಬಿಡುಗಡೆ ಮಾಡುತ್ತದೆ. ಈ ಕಾರಣದಿಂದಾಗಿ, ನೀವು ಜ್ವರ ಮತ್ತು ಶೀತ ಸಮಸ್ಯೆಗಳನ್ನು ಎದುರಿಸಬಹುದು.