Sunday, September 8, 2024

Latest Posts

Digital India : ಡಿಜಿಟಲ್ ಸುರಕ್ಷತೆಯೆಡೆಗೆ ವೈಯುಕ್ತಿಕ ದತ್ತಾಂಶ ಸುರಕ್ಷತಾ ಕಾನೂನು : ಸಂಸದ ತೇಜಸ್ವೀ ಸೂರ್ಯ

- Advertisement -

Banglore News : ಮೊಬೈಲ್ ಬಳಕೆದಾರರ ವೈಯುಕ್ತಿಕ  ಹಿತಾಸಕ್ತಿ ಕಾಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಡಿಜಿಟಲ್ ದತ್ತಾಂಶ ಸುರಕ್ಷತಾ ಕಾನೂನು ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು, ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಪ್ಪಿಗೆ ( Consent) ಪತ್ರಗಳನ್ನು ಪ್ರಾದೇಶಿಕ ಭಾಷೆಗಳಲ್ಲಿಯೂ ಲಭ್ಯವಾಗುವಂತೆ ಮಾಡಿರುವುದು ಕೇಂದ್ರ ಸರ್ಕಾರಕ್ಕೆ ದೇಶದ ಜನತೆಯ ದತ್ತಾಂಶ ಸಂಗ್ರಹಣೆ ವಿಷಯದಲ್ಲಿ ಇರುವ ಕಾಳಜಿಗೆ ಸಾಕ್ಷಿ ಎಂದು ಸಂಸದ  ತೇಜಸ್ವೀ ಸೂರ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಸದ ತೇಜಸ್ವೀ ಸೂರ್ಯ ನೇತೃತ್ವದಲ್ಲಿ ‘ ಸಂಸದ್ ಧ್ವನಿ ‘ ಯ ಆವೃತ್ತಿಯು ಈ ಬಾರಿ ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ಅನುಮೋದನೆಗೊಂಡ ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಆಕ್ಟ್ ಕುರಿತಾಗಿದೆ. ಕೇಂದ್ರ ಸಚಿವರಾದ D ರಾಜೀವ್ ಚಂದ್ರಶೇಖರ್ & ಸಾರ್ವಜನಿಕರು ಇದರಲ್ಲಿ ಪಾಲ್ಗೊಳ್ಳುವ ಮೂಲಕ ಸಂಸತ್ತಿನಲ್ಲಿ ಅನುಮೋದನೆಗೊಳ್ಳುವ ಕಾಯ್ದೆ, ಕಾನೂನುಗಳ ಕುರಿತಾಗಿ ಸಾರ್ವಜನಿಕ ರೊಂದಿಗಿನ ಸಂವಾದ ಕಾರ್ಯಕ್ರಮ ಇದಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ತೇಜಸ್ವೀ ಸೂರ್ಯ ರವರು, ” ಮೊಬೈಲ್ ಆಪ್ ಗಳ ಬಳಕೆಗೆ ಇರುವ ಅನುಮತಿ, ಒಪ್ಪಿಗೆ ಫಾರ್ಮ್ ಗಳನ್ನು ಅತ್ಯಂತ ಸರಳೀಕರಣಗೊಳಿಸಿ, ಪ್ರಾದೇಶಿಕ ಭಾಷೆಯಲ್ಲಿ ಪ್ರಕಟಗೊಳಿಸುವುದರಿಂದ ಅತ್ಯಂತ ಸಾಮಾನ್ಯ ನಾಗರಿಕನಿಗೂ ಕೂಡ ತನ್ನ ವೈಯುಕ್ತಿಕ ದತ್ತಾಂಶ ಯಾವ ರೀತಿಯಲ್ಲಿ ಬಳಕೆಯಾಗುತ್ತಿದೆ ಎಂಬ ಅರಿವು ಮೂಡಲು ಸಾಧ್ಯ. ಇಂತಹ ಕ್ರಮಗಳಿಂದ ದತ್ತಾಂಶ ಸೋರಿಕೆ ಕೂಡ ತಡೆಗಟ್ಟಲು ಸಾಧ್ಯ ” ಎಂದು ತಿಳಿಸಿದರು.

ಕೇಂದ್ರ ಮಾಹಿತಿ & ತಂತ್ರಜ್ಞಾನ ಸಚಿವರಾದ ಶ್ರೀ ರಾಜೀವ್ ಚಂದ್ರಶೇಖರ್ ಮಾತನಾಡಿ, 2010 ರಿಂದ ರಾಜ್ಯಸಭಾ ಸದಸ್ಯರಾಗಿ ಈ ಕಾಯ್ದೆ ಜಾರಿಗೆ ಪಟ್ಟ ಶ್ರಮ ವಿವರಿಸಿದರು. ವೈಯುಕ್ತಿಕ ದತ್ತಾಂಶ ಸುರಕ್ಷತೆ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕು. ಪ್ರಧಾನಿ ಶ್ರೀ ನರೇಂದ್ರ ಮೋದಿ ರವರ ಆಶಯದಂತೆ, ದೇಶದಲ್ಲಿ ರೂಪುಗೊಳ್ಳುವ ಯಾವುದೇ ಕಾನೂನು ಕೂಡ ಸಾರ್ವಜನಿಕರ ಹಿತಾಸಕ್ತಿಗೇ ಪ್ರಥಮ ಆದ್ಯತೆ ಎಂದು ಶ್ರೀ ರಾಜೀವ ಚಂದ್ರಶೇಖರ್ ವಿವರಿಸಿದರು.

ನಂತರ ನಡೆದ ಸಂವಾದದಲ್ಲಿ ಶ್ರೀ ತೇಜಸ್ವೀ ಸೂರ್ಯ ರವರು, ” ಈ ಕಾನೂನು ಜಾರಿಗೆ ಬರುವ ನಿಟ್ಟಿನಲ್ಲಿ ಬೆಂಗಳೂರಿನ ಕೊಡುಗೆಯೂ ಅಪಾರ. ಕೇಂದ್ರ ಸಚಿವರಾದ ಶ್ರೀ ರಾಜೀವ್ ಚಂದ್ರಶೇಖರ್ ನಮ್ಮ ಕರ್ನಾಟಕದವರು, ನಾನೂ ಕೂಡ ಜಂಟಿ ಸದನ ಸಮಿತಿಯ ಸದಸ್ಯನಾಗಿದ್ದು, ನಗರದ ಅನೇಕ ವಕೀಲರು, ವಿಷಯ ತಜ್ಞರಾದ ಶ್ರೀ ಶರದ್ ಶರ್ಮಾ ರಂತಹ ಬೆಂಗಳೂರಿನ ಅನೇಕರು ಈ ಕಾನೂನು ಜಾರಿಗೆ ಬರುವಲ್ಲಿ ಶ್ರಮಿಸಿದ್ದು ಶ್ಲಾಘನೀಯ ಎಂದು ತಿಳಿಸಿದರು.

Lakshmi Hebbalkar : ಭಾನುವಾರವೂ ನಿಲ್ಲದ ಜನಪ್ರವಾಹ : ತಾಳ್ಮೆಯಿಂದಲೇ ಅಹವಾಲು ಆಲಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Lakshmi Hebbalkar : ಪದ್ಮಜಾದೇವಿ ಹಲಗೇಕರ್ ಪಾರ್ಥಿವ  ಶರೀರದ ದರ್ಶನ ಪಡೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ : ಒಳಚರಂಡಿ ನಿರ್ಮಾಣದ ಕಾಮಗಾರಿಗೆ ಚಾಲನೆ

- Advertisement -

Latest Posts

Don't Miss