ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್‌6 ಲೈಟ್ ಲಾಂಚ್

ಜೂನ್ 8ರಂದು ಅಂದ್ರೆ ಇಂದು ಭಾರತದಲ್ಲಿ ಸ್ಯಾಮ್‌ಸಂಗ್ ಕಂಪನಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್‌6 ಲೈಟ್ ಲಾಂಚ್ ಆಗಲಿದ್ದು. ಇನ್ನು ಈ ಟ್ಯಾಬ್‌ ಆನ್‌ಲೈನ್‌ ಆ್ಯಪ್‌ಗಳಾದ ಅಮೇಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ.

ಇದರ ಡಿಸ್‌ಪ್ಲೇ ನೋಡೋದಾದ್ರೆ 10.4 ಇಂಚು ಇದ್ದು, 4ಜಿಬಿ ರ್ಯಾಮ್, 128 ಜಿಬಿ ಸ್ಟೋರೇಜ್ ಸ್ಪೇಸ್ ಇರತ್ತೆ. ಇದು ಓಕ್ಟಾ ಕೋರ್ ಪ್ರೊಸೆಸರ್ ಹೊಂದಿದ್ದು, ಫ್ರಂಟ್ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಹೊಂದಿದೆ. ಇನ್ನು ಬ್ಯಾಕ್ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಹೊಂದಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್‌6 ಲೈಟ್ ಆ್ಯಂಡ್ರಾಯ್ಡ್ 10 ವರ್ಷನ್ ಹೊಂದಿದ್ದು, 7040MAh ಬ್ಯಾಟರಿ ಕ್ಯಾಪ್ಯಾಸಿಟಿ ಹೊಂದಿದೆ.

ಗುಲಾಬಿ, ನೀಲಿ ಮತ್ತು ಗ್ರೇ ಕಲರ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್‌6 ಲೈಟ್ ಲಭ್ಯವಿದೆ. ಇದರ ಬೆಲೆ ಎಷ್ಟು ಅಂತಾ ಗೊತ್ತಾಗದಿದ್ದರೂ, ಮೂವತ್ತು ಸಾವಿರ ಅಥವಾ ಮೂವತ್ತು ಸಾವಿರಕ್ಕೂ ಹೆಚ್ಚು ಅಥವಾ ಅದರ ಆಸುಪಾಸಿನ ಬೆಲೆ ಇರಬಹುದೆಂದು ಅಂದಾಜಿಸಲಾಗಿದೆ.

https://youtu.be/QJjNPyyJl-E

About The Author