Wednesday, December 3, 2025

Latest Posts

ಇನ್ಮುಂದೆ ‘ಸಂಚಾರ್ ಸಾಥಿ’ ಆ್ಯಪ್ ಫೋನ್‌ಗಳಲ್ಲಿ ಕಡ್ಡಾಯ!

- Advertisement -

ಆನ್ಸೆನ್ ಮೋಸ ತಡೆಗೆ ಸರ್ಕಾರದ ಸಂಚಾ‌ರ್ ಸಾಥಿ’ ಆ್ಯಪನ್ನು ಎಲ್ಲಾ ಮೊಬೈಲ್‌ಗಳಲ್ಲಿ ಇನ್‌ಸ್ಟಾಲ್ ಮಾಡುವಂತೆ ಕೇಂದ್ರ ಸರ್ಕಾರ ಫೋನ್ ತಯಾರಕರಿಗೆ ಸೂಚಿಸಿದೆ. ದೇಶದಲ್ಲಿ ಮಾರಾಟವಾಗುವ ಎಲ್ಲಾ ಮೊಬೈಲ್‌ಗೆ ಇದು ಅನ್ವಯಿಸಲಿದ್ದು, ಡಿಲೀಟ್ ಆಗದಂತೆ ಸಾಫ್ಟ್‌ವೇರ್ ಅಭಿವೃದ್ಧಿ ಮಾಡಲು ಸೂಚಿಸಿದೆ ಎನ್ನಲಾಗಿದೆ.

ಸೈಬರ್ ಅಪರಾಧಗಳ ಹೆಚ್ಚಳವನ್ನು ತಡೆಯುವ ಉದ್ದೇಶದಿಂದ ಟೆಲಿಕಾಂ ಇಲಾಖೆ ದೇಶದ ಎಲ್ಲಾ ಸ್ಮಾರ್ಟ್‌ಫೋನ್ ತಯಾರಕರಿಗೆ ಮಹತ್ವದ ಆದೇಶ ಹೊರಡಿಸಿದೆ. ನವೆಂಬರ್ 28ರಂದು ಹೊರಬಂದ ನಿರ್ದೇಶನದ ಪ್ರಕಾರ, ಭಾರತದಲ್ಲಿ ಮಾರಾಟಕ್ಕೆ ಬರುವ ಪ್ರತಿಯೊಂದು ಹೊಸ ಸ್ಮಾರ್ಟ್‌ಫೋನ್ ಮಾದರಿಯಲ್ಲೂ ಸರ್ಕಾರಿ ಸೈಬರ್ ಭದ್ರತಾ ಆ್ಯಪ್ ‘ಸಂಚಾರ್ ಸಾಥಿ’ ಅನ್ನು ಕಡ್ಡಾಯವಾಗಿ ಪ್ರಿ ಇನ್‌ಸ್ಟಾಲ್ ಮಾಡಿರಬೇಕು.

ಮೊಬೈಲ್ ಕಳವಾದ ಬಳಿಕ ನಡೆಯುವ ಆನ್ಸೆನ್ ಮೋಸಗಳನ್ನು ತಡೆ ಯಲು ಇದು ನೆರವಾಗಲಿದೆ. ಸಂಚಾರ್ ಸಾಥಿ ಆ್ಯಪ್ ಮೂಲಕ ಕಳೆದುಹೋದ ಮೊಬೈಲ್‌ಗಳನ್ನು ಹುಡುಕಲು, ಬ್ಲಾಕ್ ಮಾಡಲು ಸಹಾಯವಾಗುತ್ತದೆ ಎಂದು ಸರ್ಕಾರ ಹೇಳಿದೆ. ಈ ಆ್ಯಪನ್ನು ಸರ್ಕಾರ ಈ ವರ್ಷ ಜನವರಿಯಲ್ಲಿ ಬಿಡುಗಡೆ ಮಾಡಿತ್ತು, ಅದಾದ ಬಳಿಕ 7 ಲಕ್ಷ ಫೋನ್‌ಗಳನ್ನು ಹುಡುಕಲು ಇದರಿಂದ ಆನ್‌ಲೈನ್ ವಂಚನೆ ತಡೆಯಲು ಈ ಕ್ರಮಸಹಾಯವಾಗಿದೆ ಎಂದಿದೆ.

ಆದ್ರೆ ಇದಕ್ಕೆ ಹಲವರಿಂದ ವಿರೋಧ ವ್ಯಕ್ತವಾಗಿದೆ. ಬಳಕೆದಾರರ ಅನುಮತಿಯಿಲ್ಲದೇ ಸರ್ಕಾರವೊಂದರ ಆ್ಯಪನ್ನು ಇನ್‌ಸ್ಟಾಲ್ ಮಾಡುವುದು ಖಾಸಗಿ ಹಕ್ಕು ಉಲ್ಲಂಘನೆ ಮಾಡಿದಂತೆ ಎಂದು ಹಲವು ವಕೀಲರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇತರ ಆ್ಯಪ್ ಗಳನ್ನು ಇನ್‌ಸ್ಟಾಲ್ ಮಾಡಲು ಒಪ್ಪದ ಆ್ಯಪಲ್‌ಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಲಿದೆ ಎನ್ನಲಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss