Tuesday, August 5, 2025

Latest Posts

ಸಂಚಾರಿ ಪೊಲೀಸರಿಂದಲೇ ರಸ್ತೆಯಲ್ಲೇ ಹೆಲ್ಮೆಟ್ ಬಗ್ಗೆ ಜಾಗೃತಿ ಮಾಹಿತಿ..!

- Advertisement -

Banglore News:

ಹೆಲ್ಮೆಟ್ ಬಗ್ಗೆ  ಇದೀಗ ಜಾಗೃತಿ ಮೂಡಿಸಲು ಸ್ವತಹ ಸಂಚಾರಿ ಪೊಲೀಸರೇ ಮುಂದೆ ಬಂದಿದ್ದಾರೆ. ಹೆಲ್ಮೆಟ್ ಇಲ್ಲದೆ ಅದೆಷ್ಟೋ ದ್ವಿಚಕ್ರ ವಾಹನ ಚಾಲಕರು ಸಂಚರಿಸುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇದೀಗ ಅಂತಹ ಎಲ್ಲರಿಗೂ ಜಾಗೃತಿ ನೀಡಲು ಸಂಚಾರಿ ಪೊಲೀಸರೇ ಮುಂದಾಗಿದ್ದಾರೆ. ವಾಹನ ಚಾಲನೆ ಮಾಡುವಾಗ ಐ.ಎಸ್.ಐ ಗುಣಮಟ್ಟದ ಹೆಲ್ಮೆಟ್ ಧರಿಸಿ, ಜಾಗರೂಕತೆ ಹಾಗೂ ಸುರಕ್ಷಿತವಾಗಿ ವಾಹನ ಚಲಾಯಿಸುವಂತೆ ರಸ್ತೆಯಲ್ಲೇ ಅಭಿಯಾಣ ಮಾಡಿ ಜಾಗೃತಿ ಮೂಡಿಸಿದ್ಧಾರೆ. ಈ ವಿಚಾರವನ್ನು ಸಂಚಾರಿ ಪೊಲೀಸ್ ಖಾತೆ ಟ್ವೀಟ್ ಮಾಡಿದೆ.

ದ್ವಿಚಕ್ರ ವಾಹನ ಚಾಲಕರು ವಾಹನ ಚಾಲನೆ ಮಾಡುವಾಗ ಐ.ಎಸ್.ಐ ಗುಣಮಟ್ಟದ ಹೆಲ್ಮೆಟ್ ಧರಿಸಿ, ಜಾಗರೂಕತೆ ಹಾಗೂ ಸುರಕ್ಷಿತವಾಗಿ ವಾಹನ ಚಲಾಯಿಸುವಂತೆ ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಎ.ಎಸ್.ಆರ್ ಜಂಕ್ಷನ್ & ಪೋಲೀಸ್ ರಸ್ತೆ ಯಲ್ಲಿ ಸಿಬ್ಬಂದಿ ಮುನಿರಾಜು ರವರು ಇಂದು ಜಾಗೃತಿ ಮೂಡಿಸಿರುತ್ತಾರೆ. ಎಂದು  ಟ್ವೀಟ್ ಮಾಡಿದೆ.

“ನಾನು ಕ್ಷಮೆ ಕೇಳಲು ಸಿದ್ಧನಿದ್ದೇನೆ…” : ಅರವಿಂದ್ ಲಿಂಬಾವಳಿ

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಸಮಸ್ಯೆ: ಕೇಂದ್ರ ಸಚಿವರ ಜೊತೆ ಚರ್ಚೆ – ಸಚಿವ ಕೆ.ಗೋಪಾಲಯ್ಯ

ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ವಿರುದ್ದ ಸಂತ್ರಸ್ತೆಯಿಂದ ಮಹಿಳಾ ಆಯೋಗಕ್ಕೆ ದೂರು

- Advertisement -

Latest Posts

Don't Miss