- Advertisement -
www.karnatakatv.net:ರಾಷ್ಟ್ರಪ್ರಶಸ್ತಿ ವಿಜೇತ ದಿವಂಗತ ನಟ ಸಂಚಾರಿ ವಿಜಯ್ ನಟನೆಯ ಸ್ಯಾಂಡಲ್ ವುಡ್ ನ ಪುಕ್ಸಟ್ಟೆ ಲೈಫು ಸಿನಿಮಾದ ಪ್ರೀಮಿಯರ್ ಶೋ ಇಂದು ಮೈಸೂರಲ್ಲಿ ನಡೆಯಿತು. ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರೋ ನಟನನ್ನು ಮಿಸ್ ಮಾಡಿಕೊಳ್ತಿರೋ ಚಿತ್ರ ತಂಡ ನಟ ಸಂಚಾರಿ ವಿಜಯ್ ಗೆಂದೇ ಪ್ರತ್ಯೇಕ ಆಸನ ಮೀಸಲಿಟ್ಟಿತ್ತು. ಅಷ್ಟೇ ಅಲ್ಲದೆ ಸೀಟ್ ಮೇಲೆ ಸಂಚಾರಿ ವಿಜಯ್ ಅಂತಲೂ ಬರೆಯಲಾಗಿತ್ತು.
ಇನ್ನು ಈ ಚಿತ್ರದಲ್ಲಿ ಸಂಚಾರಿ ವಿಜಯ್ ಮತ್ತೊಮ್ಮೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರವಿಂದ್ ಕುಪ್ಳಿಕರ್ ನಿರ್ದೇಶನದ ಈ ಚಿತ್ರವನ್ನು ಸರ್ವಸ್ವ ಪ್ರೊಡಕ್ಷನ್ ಬಂಡವಾಳ ಹೂಡಿದೆ.
- Advertisement -