ಸ್ಯಾಂಡಲ್‌ವುಡ್‌ನಲ್ಲಿ ಕೃಷ್ಣ ಅಂತಾನೇ ಫೇಮಸ್ ಆಗಿರೋ ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಪತಿ ಅಜಯ್ ರಾವ್ ಅವರಿಗೆ ಸ್ವಪ್ನ ರಾವ್ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಈ ಇಬ್ಬರೂ ಸಹ 2014ರಲ್ಲಿ ಹೊಸೇಪಟೆಯಲ್ಲಿ ಸರಳವಾಗಿ ವಿವಾಹವಾಗಿದ್ದರು. ಇಬ್ಬರಿಗೂ ಮಗಳು ಸಹ ಇದ್ದಾಳೆ. ಮದುವೆಯಾದ 11 ವರ್ಷದ ಬಳಿಕ ಇದೀಗ ಈ ದಂಪತಿ ಬೇರಾಗುತ್ತಿದ್ದಾರೆ.
ನಟ ಅಜಯ್ ರಾವ್ ವಿರುದ್ಧ ಅವರ ಪತ್ನಿ ಸಪ್ನಾ ಅವರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ಸಹ ದಾಖಲಿಸಿದ್ದಾರೆ. ಪತ್ನಿ ಜೊತೆಗೆ ಮಗಳು ಚರಿಷ್ಮಾ ಸಹ ಅಜಯ್ ರಾವ್ ವಿರುದ್ಧ ದೂರು ದಾಖಲು ಮಾಡಿದ್ದಾರೆ ಎನ್ನಲಾಗುತ್ತಿದೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟು ಬಹಿರಂಗವಾಗಬೇಕಿದೆ.
ಸ್ಯಾಂಡಲ್‌ವುಡ್ ನಲ್ಲಿ ಬಹಳಷ್ಟು ವಿಚ್ಚೇದನ ಕೇಸ್ ಗಳು ಹೆಚ್ಚಾಗುತ್ತಲೇ ಇವೆ. ಇತ್ತಿಚೀಗಷ್ಟೆ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾಗೌಡ ವಿಚ್ಚೇದನ ಪಡೆದುಕೊಂಡಿದ್ದರು. ಇದೇ ರೀತಿ ದೊಡ್ಮನೆ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಕೂಡ ವಿಚ್ಚೆದನ ಪಡೆದಿದ್ದರು. ಇದೇ ಸಾಲಿಗೆ ಈಗ ಅಜಯ್ ರಾವ್ ಮತ್ತು ಸ್ವಪ್ನಾ ಸೇರಿಕೊಂಡಿದ್ದಾರೆ.
ಇನ್ನು, 2003 ರಲ್ಲಿ ಬಿಡುಗಡೆ ಆದ ‘ಎಕ್ಸ್ಕ್ಯೂಸ್ ಮೀ’ ಸಿನಿಮಾ ಮೂಲಕ ಅಜಯ್ ರಾವ್ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಅದಕ್ಕೆ ಮುನ್ನ ಸುದೀಪ್ ನಟನೆಯ ಕಿಚ್ಚ ಸಿನಿಮಾನಲ್ಲಿ ಸುದೀಪ್ ಗೆಳೆಯನ ಪಾತ್ರದಲ್ಲಿ ನಟಿಸಿದ್ದರು. ತಾಜ್ ಮಹಲ್, ಪ್ರೇಮ್ ಕಹಾನಿ, ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣ-ಲೀಲಾ ಇನ್ನೂ ಹಲವು ಹಿಟ್ ಸಿನಿಮಾಗಳಲ್ಲಿ ಅಜಯ್ ನಟಿಸಿದ್ದಾರೆ. ಇದೇ ವರ್ಷ ಬಿಡುಗಡೆ ಆದ ಯುದ್ಧಕಾಂಡ 2 ಸಿನಿಮಾನಲ್ಲಿ ನಟಿಸುವ ಜೊತೆಗೆ ನಿರ್ಮಾಣವನ್ನೂ ಸಹ ಅಜಯ್ ರಾವ್ ಮಾಡಿದ್ದರು. ಸಿನಿಮಾ ಅಂದುಕೊಂಡಷ್ಟು ಹಿಟ್ ಕೊಡಲಿಲ್ಲ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ