Friday, July 4, 2025

Latest Posts

Sandalwood News: ಯಲಾಕುನ್ನಿ ಟೀಸರ್ ರಿಲೀಸ್: ನಿರೀಕ್ಷೆ ಹುಟ್ಟಿಸಿದ ಕೋಮಲ್ ಸಿನಿಮಾ

- Advertisement -

Sandalwood News: ಸ್ಯಾಂಡಲ್ ವುಡ್ ನ ಲಾಫಿಂಗ್ ಸ್ಟಾರ್ ಕೋಮಲ್ ಅವರು ವಜ್ರಮುನಿ ಗೆಟಪ್ ನಲ್ಲಿ ಹೇಗಿರುತ್ತಾರೆ ಎನ್ನುವ ಕುತೂಹಲ ಈಗಾಗಲೇ ತುಸು ಹೆಚ್ಚಾಗಿದೆ. ಇದಕ್ಕೆ ಕಾರಣ ಯಲಾಕುನ್ನಿ ಸಿನಿಮಾ. ಗಣೇಶನ ಹಬ್ಬದ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದ್ದು, ಥೇಟು ವಜ್ರಮುನಿ ಅವರೇ ಮತ್ತೆ ಬಂದಂತೆ ಫಸ್ಟ್ ಲುಕ್ ನಲ್ಲಿ ಕೋಮಲ್ ಅವರು ರಾರಾಜಿಸಿದ್ದಾರೆ. ಕೋಮಲ್ ಅವರ ಈ ಗೆಟಪ್ ಗೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಮಾತುಗಳು ವ್ಯಕ್ತವಾಗಿವೆ. ಹಾಸ್ಯ ನಟನೊಬ್ಬ ಹೀಗೆ ಮಾಸ್, ಕ್ಲಾಸ್ ಜಾನರ್ ಗಳ ಚಿತ್ರಗಳ ಹೀರೋ ಆಗುವ ಜತೆಗೆ ಯಲಾಕುನ್ನಿ ಅಂತಹ ವಿಭಿನ್ನವಾದ ಚಿತ್ರ-ಪಾತ್ರದಲ್ಲೂ ನಟಿಸುವುಕ್ಕೆ ಸಾಧ್ಯ ಎಂಬುದನ್ನು ತೋರಿಸಿದ್ದಾರೆ.

ಅಂದಹಾಗೆ ಹೀಗೆ ಕೋಮಲ್ ಅವರ ಮೇಲೆ ನಿರೀಕ್ಷಿ ಹುಟ್ಟಿಸಿರುವ ಈ ಯಲಾಕುನ್ನಿ ಚಿತ್ರದ ಟೀಸರ್ ಸೆ. 15ರ ಸಂಜೆ (ಇಂದು) 5 ಗಂಟೆಗೆ ಕೋಮಲ್ ಕುಮಾರ್ ಸ್ಟುಡಿಯೋಸ್ ಹೆಸರಿನ ಯುಟ್ಯೂಬ್ ಚಾನಲ್ ನಲ್ಲಿ
ಬಿಡುಗಡೆ ಆಗಿದೆ. ವಿಶೇಷ ಎಂದರೆ ಇದೇ ದಿನ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಬಹು ಜನಪ್ರಿಯ ರಿಯಾಲಿಟಿ ಶೋ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ಗ್ರ್ಯಾಂಡ್ ಫಿಲಾಲೆಯಲ್ಲಿ ಈ ಟೀಸರ್ ಅದ್ದೂರಿಯಾಗಿ ಅನಾವರಣಗೊಳಿಸಲಾಗಿದೆ.

ಸೌಂದರ್ಯ ಲಹರಿ ಕಂಬೈನ್ಸ್ ಮೂಲಕ ಅನುಸೂಯಾ ಕೋಮಲ್ ಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದು, ನರಸಿಂಹ ಸಿನಿಮಾಸ್ ನ ಸಹನಾ ಮೂರ್ತಿ ಅವರು ನಿರ್ಮಾಣದಲ್ಲಿ ಕೈ ಜೋಡಿಸಿದೆ. ‘ಯಲಾಕುನ್ನಿ’ ಚಿತ್ರಕ್ಕೆ ಎನ್‍.ಆರ್. ಪ್ರದೀಪ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಧರ್ಮವಿಶ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ದತ್ತಣ್ಣ, ಸಾಧು ಕೋಕಿಲ, ಮಿತ್ರ, ಸುಚೇಂದ್ರ ಪ್ರಸಾದ್, ಶಿವರಾಜ್ ಕೆ ಆರ್ ಪೇಟೆ, ತಬಲಾ ನಾಣಿ, ರಾಜು ತಾಳಿಕೋಟೆ, ಸುಮನ್ ನಗರ್ ಕರ್, ಮಾನಸಿ ಸುಧೀರ್, ಜಯಸಿಂಹ ಮುಸುರಿ, ರಘು ರಾಮನಕೊಪ್ಪ ಮುಂತಾದವರು ನಟಿಸಿದ್ದಾರೆ.ನಾಯಕಿಯರಾಗಿ ನಿಸರ್ಗ ಅಪ್ಪಣ್ಣ ಮತ್ತು ‘ಗಿಚ್ಚಿಗಿಲಿಗಿಲಿ’ಯ ಅಮೃತಾ ಬಣ್ಣ ಹಚ್ಚಿದ್ದಾರೆ. ವಿಶೇಷ ಎಂದರೆ ಮಜ್ರಮುನಿ ಅವರ ಮೊಮ್ಮಗ ಆಕರ್ಷ ವಜ್ರಮುನಿ ಕೂಡ ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

- Advertisement -

Latest Posts

Don't Miss