ಬೆಂಗಳೂರು: ರಾಜ್ಯದಲ್ಲಿ ಶ್ರೀಗಂಧ ಮರಗಳನ್ನು ಬೆಳೆಯಲು ಮತ್ತು ಮಾರಾಟ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಶ್ರೀಗಂಧದ ಮರಗಳನ್ನು ಬೆಳೆಯಲು ರಾಜ್ಯದಲ್ಲಿ ಇದ್ದ ನಿರ್ಬಂಧಗಳನ್ನು ಸರ್ಕಾರ ತೆಗೆದಿದೆ. ರಾಜ್ಯದಲ್ಲಿ ಶ್ರೀಗಂಧದ ನೀತಿ 2022ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ನೀತಿ ರಾಜ್ಯದ ರೈತರಿಗೆ ಅನುಕೂಲವಾಗಲಿದೆ ಮತ್ತು ರೈತರು ತಮ್ಮ ಜಮೀನುಗಳಲ್ಲಿ ಶ್ರೀಗಂಧವನ್ನು ಬೆಳೆಯಬಹುದು ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದಾರೆ. ಈ ಹೊಸ ನೀತಿಯನ್ವಯ ಅರಣ್ಯ ಇಲಾಖೆಯಿಂದ ಶ್ರೀಗಂಧ ಮರಗಳಿಗೆ ಮೈಕ್ರೋಚಿಪ್ ಅಳವಡಿಸಲಾಗುವುದು. ಇದರಿಂದ ಕಳ್ಳಸಾಗಣೆದಾರರಿಂದ ರೈತರನ್ನು ರಕ್ಷಿಸಬಹುದು.
ಡಿಸೆಂಬರ್ 7 ರಿಂದ 29ರವೆರೆಗೆ ಸಂಸತ್ ಚಳಿಗಾಲ ಅಧಿವೇಶನ
ಶ್ರೀಗಂಧವನ್ನು ಹೆಚ್ಚು ಬೆಳೆಯಲು ರೈತರಿಗೆ ಪ್ರೋತ್ಸಾಹಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕರ್ನಾಟಕ ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶ್ರೀಗಂಧಕ್ಕೆ ಹೆಚ್ಚು ಬೇಡಿಕೆ ಇದೆ. ಹಾಗಾಗಿ ಸರ್ಕಾರ ಇದರ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ನಿರ್ಧರಿಸಿದೆ ಇದರಿಂದ ರೈತರು ಶ್ರೀಗಂಧ ಬೆಳೆದು ಹಣ ಸಂಪಾದಿಸಬಹುದು ಎಂದು ಹೇಳಿದರು.
ಸಿದ್ದರಾಮಯ್ಯ ಲಿಂಗಾಯತರ ಬಗ್ಗೆ ಏನೇನ್ ಭಾಷಣ ಮಾಡಿದ್ದಾರೆ ಎಲ್ಲಾ ದಾಖಲೆಗಳು ಈಗಲೂ ಲಭ್ಯವಿದೆ : ಸಚಿವ ಜೆ.ಸಿ ಮಧುಸ್ವಾಮಿ
ಅರುಣಾಚಲದ ಮೊದಲ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಚಾಲನೆ




