ಸಿನಿಮಾ ಸುದ್ದಿ: ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ಸ್ ಆಗಿರುವಂತಹ ವಿಜಯ್ ರಾಘವೇಂದ್ರ ಮತ್ತು ಪತ್ನಿ ಸ್ಪಂದನ ದಂಪತಿಗಳ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ ಇನ್ನೊಬ್ಬರಿಗೆ ಯಾವತ್ತು ತೊಂದರೆ ಬಯಸದಂತಯ ಜೀವಿಗಳು ಎಂದರೆ ವಿಜಯ್ ಕುಟುಂಬ ಇದುವರೆಗೂ ಯಾವುದೇ ರೀತಿಯ ಟ್ರೋಲ್ ಗೆ ಒಳಗಾಗದಂತಹ ಕುಟುಂಬ ಎಂದರೆ ಇವರದ್ದು.
ಆದರೆ ಅಂತವರ ಬಾಳಲ್ಲಿ ಸದ್ದಿಲ್ಲದೆ ಬಿರುಗಾಳಿಯಂತೆ ಬರ ಸಿಡಿಲು ಬಡಿದಿದೆ. ಯಾಕೆಂದರೆ ಚಿನ್ನಾರಿ ಮುತ್ತಾ ಎಂದರೆ ಪ್ರಖ್ಯಾತಿಯಾಗಿರುವ ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಿವೃತ್ತ ಪೋಲಿಸ್ ಅಧಿಕಾರಿ ಬಿ.ಕೆ ಶಿವರಾಂ ಅವರ ಪುತ್ರಿಯಾಗಿರುವ ಮತ್ತು ಚಿನ್ನೇಗೌಡರ ಸೊಸೆಯಾಗಿದ್ದ ಸ್ಪಂದನಾ ವಿಜಯ್ ರಾಘವೇಂದ್ರ ಅವರು 2007 ರಲ್ಲಿ ಮದುವೆಯಾಗಿದ್ದರು ಕೆಳೆದ ಮೂರು ದಿನಗಳ ಹಿಂದೆ ಬ್ಯಾಂಕಾಕ್ ಗೆ ಪ್ರವಾಸಕ್ಕೆ ತೆರಳಿದ್ದ ವಿಜಯ್ ಅವರ ಕುಟುಂಬ ವಿದೇಶದಲ್ಲಿ ಪ್ರವಾಸಕ್ಕೆ ತೆರಳಿದ್ದ ಸಮಯದಲ್ಲಿ ಸ್ಪಂದನಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ವಿಜಯ ರಾಘವೇಂದ್ರ ಪತ್ನಿ ಸ್ಪಂದನ ನಿಧನರಾಗಿದ್ದಾರೆ, ವಿದೇಶಕ್ಕೆ ಪ್ರವಾಸಕ್ಕೆ ಹೋದಾಗ ಎದೆ ನೋವು ಕಾಣಿಸಿಕೊಂಡಿತ್ತು.ಇದಕ್ಕೆ ಸಂಬಂದಿಸಿದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸ್ಪಂದನ ಕೊನೆಯುಸಿರೆಳೆದಿದ್ದಾರೆ.
Advertisement: ಆರೋ ಜಾಹಿರಾತಿನಲ್ಲಿ ನಿರ್ದೇಶಕನ ಪಾತ್ರದಲ್ಲಿ ಹೃತಿಕ್ ರೋಷನ್
Harshika Bhuvan : ಆಗಸ್ಟ್ 24ಕ್ಕೆ ಹರ್ಷಿಕಾ -ಭುವನ್ ವಿವಾಹ : ಕಾರ್ಡ್ ಕೊಡೋದ್ರಲ್ಲಿ ಬ್ಯುಸಿಯಾದ ಜೋಡಿ..!