ರಾಜ್ಯಸಭಾ ಸದಸ್ಯ ಸಂಜಯ್ ರಾವತ್ರನ್ನ ಶಿವಸೇನೆ ಮಂಗಳವಾರ ತನ್ನ ಪಕ್ಷದ ಮುಖ್ಯ ವಕ್ತಾರನ್ನಾಗಿ ನೇಮಿಸಿದೆ.

ಸಂಜಯ್ ರಾವತ್ ಶಿವಸೇನೆಯ ಪತ್ರಿಕೆ ಸಾಮ್ನಾದ ಎಕ್ಸಿಕ್ಯುಟಿವ್ ಎಡಿಟರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಬೈಯನ್ನ ಪಾಕಿಸ್ತಾನ ಆಕ್ರಮಿತ ಕಾಶ್ಮೀತರಕ್ಕೆ ಹೋಲಿಸಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಸಂಜಯ್ ರಾವತ್ ಭಿನ್ನಾಭಿಪ್ರಾಯ ಹೊಂದಿದ್ದು ಭಾರೀ ಸುದ್ದಿಯಾಗಿತ್ತು. ಅಲ್ಲದೇ ಶಿವಸೇನೆ ಮುಖಂಡ ಸಂಜಯ್ ರಾವತ್ರಿಂದ ನನಗೆ ಜೀವ ಬೆದರಿಕೆ ಇದೆ ಅಂತಾನೂ ಕಂಗನಾ ಆರೋಪ ಮಾಡಿದ್ದರು.




