Wednesday, October 15, 2025

Latest Posts

Sanjith hegde: ಜಿಗರ್ ಮೂಲಕ ಮತ್ತೆ ಮೋಡಿ ಮಾಡಿದ ಗಾಯಕ

- Advertisement -

ಸ್ಯಾಂಡಲ್‌ವುಡ್: ನಟ ಪ್ರವೀಣ್ ತೇಜ್ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಪ್ರವೀಣ್ ಈ ಬಾರಿ ಮಾಸ್ ಲುಕ್‌ನಲ್ಲಿ ಎಂಟ್ರಿ ಕೊಡುತ್ತಿದ್ದಾರೆ.

ಅಂದಹಾಗೆ ಮೊದಲ ಬಾರಿಗೆ ಪ್ರವೀಣ್ ‘ಜಿಗರ್’ ಎನ್ನುವ ಆಕ್ಷನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿ ರಿಲೀಸ್‌ಗೆ ರೆಡಿಯಾಗಿರುವ ಜಿಗರ್ ಸದ್ಯ ಹಾಡಿನ ಮೂಲಕ ಆಮಂತ್ರಣ ನೀಡಿದೆ.ಜಿಗರ್ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಮಾಸ್ ಸಿನಿಮಾ ಆಗಿದ್ದರೂ ಸದ್ಯ ರೊಮ್ಯಾಂಕ್ ಹಾಡಿನ ಮೂಲಕ ಮೋಡಿ ಮಾಡುತ್ತಿದ್ದಾರೆ ಪ್ರವೀಣ್. ಅಂದಹಾಗೆ ಸದ್ಯ ಬಿಡುಗಡೆಯಾಗಿರುವ ಈ ಹಾಡು ಗಾನಪ್ರಿಯರ ಹಾಟ್ ಫೇವರಿಟ್ ಸಿಂಗರ್ ಸಂಚಿತ್ ಹೆಗ್ಡೆ ಕಂಠದಲ್ಲಿ ಮೂಡಿಬಂದಿದೆ. ಸಂಚಿತ್ ಹಾಡಿರುವ ಬಹುತೇಕ ಹಾಡುಗಳು ಸೂಪರ್ ಹಟ್. ಜಿಗರ್ ಸಿನಿಮಾದ ಈ ರೊಮ್ಯಾಂಟಿಕ್ ಹಾಡು ಕೂಡ ಸಂಚಿತ್ ಧ್ವನಿಯಲ್ಲಿ ಅಷ್ಟೇ ಅದ್ಭುತವಾಗಿ ಮೂಡಿ ಬಂದಿದೆ.

‘ಸುಮ್ಮನೆ…..’ ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡಿಗೆ ರಿತ್ವಿಕ್ ಮುರಳಿಧರ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸುಂದರ ಹಾಡಿಗೆ ಅರ್ಜುನ್ ಲೂಯಿಸ್ ಸಾಹಿತ್ಯವಿದೆ. ಈಗಾಗಲೇ ಚಮಕ್, ವೆನಿಲ್ಲ, ಸಖತ್ ಸೇರಿದಂತೆ ಅನೇಕ ಸಿನಿಮಾಗಳಿಗೆ ಹಾಡು ಬರೆದಿರುವ ಅರ್ಜುನ್ ಇದೀಗ ಜಿಗರ್ ಸಿನಿಮಾದ ಹಾಡನ್ನೂ ಬರೆದಿದ್ದಾರೆ. ಈ ಸುಂದರ ಹಾಡನ್ನು ಕರಾವಳಿ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಮಲ್ಫೆ, ಮರುವಂತೆ, ಮಂಗಳೂರು ಸುತ್ತಮುತ್ತ ಸೆರೆಹಿಡಿಯಲಾಗಿದೆ. ಸಿನಿಮಾ ಕೂಡ ಇದೇ ಬ್ಯಾಕ್‌ಡ್ರಾಪ್‌ನಲ್ಲಿ ಇರಲಿದೆ.

ಅಂದಹಾಗೆ ಪ್ರವೀಣ್ ತೇಜ್ ಅವರನ್ನು ಆಕ್ಷನ್ ಅವತಾರದಲ್ಲಿ ಅಭಿಮಾನಿಗಳ ಮುಂದೆ ಕರೆತರುತ್ತಿದ್ದಾರೆ ನಿರ್ದೇಶಕ ಸೂರಿ ಕುಂದರ್. ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಅನೇಕ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಸೂರಿ ಜಿಗರ್ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ತನ್ನ ಮೊದಲ ಸಿನಿಮಾದ ಮೇಲೆ ನಿರ್ದೇಶಕ ಸೂರಿ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ಪ್ರವೀಣ್‌ಗೆ ನಾಯಕಿಯಾಗಿ ವಿಜಯ್ ಶ್ರೀ ಕಾಣಿಸಿಕೊಂಡಿದ್ದಾರೆ. ವಿಜಯ್ ಶ್ರೀ ಅವರಿಗೂ ಇದು ಮೊದಲ ಸಿನಿಮಾವಾಗಿದೆ. ಸಿನಿಮಾಗೆ ಪೂಜಾವಸಂತ್ ಕುಮಾರ್ ನಿರ್ಮಾಣ ಮಾಡಿದ್ದಾರೆ.

ನಟ ಪ್ರವೀಣ್ ಮೊದಲ ಬಾರಿಗೆ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂದು ಎದುರುನೋಡುತ್ತಿದ್ದಾರೆ. ಕೊನೆಯದಾಗಿ ಪ್ರವೀಣ್ ಹೊಂದಿಸಿ ಬರೆಯಿರಿ ಸಿನಿಮಾ ಮೂಲಕ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದ್ದರು. ಇದೀಗ ಜಿಗರ್ ಮೂಲಕ ಎಂಟ್ರಿಕೊಡುತ್ತಿದ್ದಾರೆ. ಸದ್ಯ ಹಾಡಿನ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿರುವ ಜಿಗರ್ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಹೆಚ್ಚಿಸಿದೆ.

“ಟೆಕ್ನೋ-ಸಾಂಸ್ಕೃತಿಕ ಉತ್ಸವ -2023 ರ” ಉದ್ಘಾಟನಾ ಕಾರ್ಯಕ್ರಮದಲ್ಲಿ ಇಂಡುವಾಳು ಸಚ್ಚಿದಾನಂದ್ ಭಾಗಿ

Film news”ಕ್ರೇಜಿ ಕೀರ್ತಿ” ಚಿತ್ರದ ಟ್ರೇಲರ್ ಬಿಡುಗಡೆ : ಯುವಕರಿಗೊಂದು ಸ್ಪೆಷಲ್ ಸಿನಿಮಾ

Release date: “ಪರ್ಯಾಯ” ಮಾರ್ಗ ಹುಡುಕಿಕೊಂಡವರ ಕಥೆ..

- Advertisement -

Latest Posts

Don't Miss