ವಿದ್ಯಾರ್ಥಿಗಳ ‘ವ್ಯಾಪಾರ’ ಪ್ರತಿಭೆ ಮೆರೆದ ಸಂತೆ ಮೇಳ!

ತುಮಕೂರಿನ ತಿಪಟೂರು, ಗಾಂಧಿನಗರ ಬಡಾವಣೆಯಲ್ಲಿ ಇರುವ ಕೇಮ್ ಬ್ರಿಡ್ಜ್ ಇಂಗ್ಲಿಷ್ ಶಾಲೆ ಈಚೆಗೆ ವಿದ್ಯಾರ್ಥಿಗಳಲ್ಲಿ ವ್ಯವಹಾರ ಮತ್ತು ಉದ್ಯಮಿಕ ಜ್ಞಾನವನ್ನು ಉತ್ತೇಜಿಸಲು ಅದ್ದೂರಿ ಸಂತೆ ಮೇಳ ಕಾರ್ಯಕ್ರಮವನ್ನು ಆಯೋಜಿಸಿತು.

ಶಾಲೆಯ ಮುಖ್ಯಸ್ಥರು ಮಾಧ್ಯಮಕ್ಕೆ ತಿಳಿಸಿದ್ದಂತೆ, ಮಕ್ಕಳನ್ನು ಉತ್ತಮ ಶಿಕ್ಷಣದೊಂದಿಗೆ ವ್ಯವಹಾರ ಜ್ಞಾನವನ್ನು ಕಲಿಸುವ ಮೂಲಕ ಭವಿಷ್ಯದಲ್ಲಿ ಒಳ್ಳೆಯ ಉದ್ಯಮಿಗಳನ್ನಾಗಿ ಮಾಡಲು ಈ ರೀತಿಯ ಕಾರ್ಯಕ್ರಮಗಳು ನೆರವಾಗುತ್ತವೆ. ಈ ಉದ್ದೇಶದಿಂದ ಶಾಲೆ ವರ್ಷದ ಹಲವು ಸಂದರ್ಭಗಳಲ್ಲಿ ಸಂತೆ ಮೇಳವನ್ನು ಆಯೋಜಿಸುತ್ತದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಭಾಗಿಯಾಗಿದ್ದು, ವಿದ್ಯಾರ್ಥಿಗಳು ಹಣ್ಣುಗಳು, ತರಕಾರಿ ಮತ್ತು ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ತಮ್ಮ ವ್ಯವಹಾರ ಕೌಶಲ್ಯವನ್ನು ಪ್ರದರ್ಶಿಸಿದರು.

ಈ ಕಾರ್ಯಕ್ರಮದಲ್ಲಿ ಪೋಷಕರು, ಶಾಲಾ ಶಿಕ್ಷಕರು ಮತ್ತು ಸಂಘದ ಮುಖ್ಯ ಕಾರ್ಯದರ್ಶಿ ಪಿ. ಮುರಳಿ ಕೃಷ್ಣ ಸೇರಿದಂತೆ ಹಲವರು ಹಾಜರಿದ್ದರು. ಮೇಳವು ಯಶಸ್ವಿಯಾಗಿ ಆಯೋಜನೆಗೊಂಡಿದ್ದು, ಭಾಗವಹಿಸಿದವರಿಗೆ ಉತ್ತಮ ಅನುಭವವನ್ನು ನೀಡಿತು.

About The Author