Tuesday, September 16, 2025

Latest Posts

ಸಮಾಜ ಸೇವೆಯೇ ಸಂತೋಷ್‌ ಲಾಡ್‌ ಉಸಿರು

- Advertisement -

ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ಸಮಾಜಿಮುಖಿ ಕಾರ್ಯಗಳಿಗೆ ಹೆಸರುವಾಸಿ. ಕಾರ್ಮಿಕ ಸಚಿವರಾದ ಮೇಲೆ ಕಾರ್ಮಿಕರ ಏಳಿಗೆಗಾಗಿ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುತ್ತಲೇ ಇದ್ದಾರೆ. ಜೊತೆಗೆ ರಾಜ್ಯದ ಜನರಿಗಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಇರ್ತಾರೆ.

ಸೆಪ್ಟೆಂಬರ್‌ 14ರಂದು ಕಲಘಟಗಿಯ ತಮ್ಮ ಅಮೃತ ನಿವಾಸದಲ್ಲಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ರು. ಮೊದಲ ಬಾರಿಗೆ ಉಚಿತ ಶ್ರವಣ ದೋಷ ತಪಾಸಣೆ ಹಾಗೂ ಶ್ರವಣ ಸಾಧನ ವಿತರಣಾ ಶಿಬಿರವನ್ನು ಹಮ್ಮಿಕೊಂಡಿದ್ರು. ಸಂತೋಷ್‌ ಲಾಡ್‌ ಫೌಂಡೇಶನ್‌ ಮತ್ತು ಬೆಂಗಳೂರಿನ ಶ್ರೀನಿವಾಸ ಹೆಲ್ತ್‌ ಕೇರ್‌ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಕಲಬುರಗಿ ಜಿಲ್ಲೆಯ ಮೂಲೆ ಮೂಲೆಗಳಿಂದ, ಹಲವಾರು ಜನರು ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ.

ಶಿಬಿರದಲ್ಲಿ 200ಕ್ಕೂ ಹೆಚ್ಚು ಜನರಿಗೆ ತಪಾಸಣೆ ಮಾಡಿ, ಶ್ರವಣ ಸಾಧನ ವಿತರಣೆ ಮಾಡಲಾಯ್ತು. ಜೊತೆಗೆ ವಿದ್ಯಾರ್ಥಿಗಳು, ರೈತರು ಸೇರಿದಂತೆ, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಪರಿಹಾರ ಒದಗಿಸುವ ಭರವಸೆ ನೀಡಿದರು.

ಇದೇ ವೇಳೆ ಮಾತನಾಡಿರುವ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ಸಂತೋಷ್‌ ಲಾಡ್‌ ಫೌಂಡೇಶನ್‌ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬರ್ತಿದೆ. ಇಂತಹ ಕಾರ್ಯಕ್ರಮಗಳಿಂದ ಸಾಕಷ್ಟು ಪ್ರಯೋಜನವಾಗಲಿದೆ. ಅವಶ್ಯಕತೆ ಇದ್ರೆ, ಮುಂದಿನ 6 ತಿಂಗಳಲ್ಲಿ, ಮತ್ತೆ ಇದೇ ರೀತಿ ಶ್ರವಣ ದೋಷ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗುವುದಾಗಿ ಹೇಳಿದ್ರು.

- Advertisement -

Latest Posts

Don't Miss