Santosh Lad ;ಮೋದಿ ಸುಳ್ಳಾಟ ಬಯಲಿಗೆ ಬರಲಿದೆ- ಸಚಿವ ಲಾಡ್

ರಾಹುಲ್ ಗಾಂಧಿ ವಿಪಕ್ಷ ನಾಯಕರಾಗಿದ್ದಾರೆ. ಈಗ ಮೋದಿಯವರ ಸುಳ್ಳಾಟ ಬಯಲಿಗೆ ಎಳೆಯಲು ಒಳ್ಳೆಯ ಅವಕಾಶವಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಲೋಕಸಭೆಯ ವಿಪಕ್ಷ ನಾಯಕರಾಗಿ ರಾಹುಲ್ ಗಾಂಧಿ ಆಯ್ಕೆ ವಿಚಾರದ ಕುರಿತು ಧಾರವಾಡದಲ್ಲಿ ಸಂತೋಷ್ ಲಾಡ್ ಮಾತನಾಡಿದ್ದಾರೆ. ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದು ನನಗೆ ಖುಷಿ ತಂದಿದೆ. ಇಂಡಿಯಾ ಒಕ್ಕೂಟಕ್ಕೆ ಧನ್ಯವಾದ ಹೇಳುವೆ.

ರಾಹುಲ್ ಗಾಂಧಿ ಸಮರ್ಥರಿದ್ದಾರೆ. ಮೋದಿ ಅವರು ಹದಿನೈದು ವರ್ಷ ಸುದ್ದಿಗೋಷ್ಠಿಯನ್ನೇ ಮಾಡದೇ ದೇಶ ನೆಡೆಸಿದ್ದಾರೆ. ಇನ್ನು ರಾಹುಲ್ ಗಾಂಧಿ ವಿಪಕ್ಷ ನಾಯಕರಾಗಿ ನಡೆಸಲು ಆಗಲ್ವಾ ಎಂದು ಪ್ರಶ್ನಿಸಿದರು.
ವಯನಾಡ್‍ನಲ್ಲಿ ಪ್ರಿಯಂಕಾ ಗಾಂಧಿ ಸ್ಪರ್ಧಿಸಿ ಗೆಲ್ಲುತ್ತಾರೆ. ಅವರು ಸಂಸತ್ ಬಂದರೆ ನಮಗೆ ಮತ್ತಷ್ಟು ಶಕ್ತಿ ಬರುತ್ತದೆ ಎಂದರು. ಡಿಕೆಶಿ ಸಿಎಂ ಆಗಲಿ ಎಂದು ಚನ್ನಗಿರಿ ಶಾಸಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ,ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು.

About The Author