Sunday, May 4, 2025

Latest Posts

Santosh lad-ಬಿಜೆಪಿಗೆ ಸೋಲಿನ ಭಯ ಶುರುವಾಗಿದೆ.

- Advertisement -

ಧಾರವಾಡ: ಲೋಕಸಭಾ ಚುನಾವಣೆಯ ಕುರಿತು ತಮ್ಮ ಅಭಿಪ್ರಾಯವನ್ನು ತಿಳಿಸಿದಂತಹ ಸಚಿವ ಸಂತೋಷ್ ಲಾಡ್ ಅವರು ಬಿಜೆಪೊಇ ಮತ್ತು ಕಾಂಗ್ರಸ್ ಮೈತ್ರಿ ವಿಚಾರ ಬಗ್ಗೆ ಬಹಳ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಅದು ಅವರವರ ಪಕ್ಷದ ವಿಚಾರ ರಾಜಕೀಯ ಪಕ್ಷಗಳು ಆಗಾಗ ಮೈತ್ರಿ ಮಾಡಿಕೊಳ್ಳುತ್ತವೆ ಅದು ಆಯಾ ಪಕ್ಷಗಳ ನಿಲುವು ಕಳೆದ ಸಲ‌ ನಾವೂ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ವಿ  ಅದು ಅವರವರ ಇಚ್ಛಾಶಕ್ತಿ, ಅವರ ಪಕ್ಷಗಳ ವಿಚಾರ  ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅವರಿಗೆ ಬಿಟ್ಟಿದ್ದು ಬಿಜೆಪಿಗೆ ಸೋಲಿನ ಭಯ ಇರಬಹುದು ಎಂದು ವ್ಯಂಗ್ಯ ಮಾಡಿದರು

ರಾಹುಲ್ ಗಾಂಧಿ ಪ್ರಖ್ಯಾತಿ ಹೆಚ್ಚುತ್ತಿದೆ ಭಾರತ ದೇಶ ಜೋಡಿಸುತ್ತೇನೆ ಅಂತ ರಾಹುಲ್ ಗಾಂಧಿ ಹೊರಟಿದ್ದಾರೆ ಬಿಜೆಪಿಯವರು ಬೆಂಕಿ ಹಚ್ಚಿ ದೇಶ ಒಡೆಯುತ್ತಿದ್ದಾರೆ. ಅದನ್ನು ಜೋಡಿಸುವ ಕೆಲಸ ನಾ ಮಾಡುವೆ ಎಂದು ರಾಹುಲ್ ಗಾಂಧಿ ಹೊರಟಿದ್ದಾರೆ ಅದಾನಿ ವಿರುದ್ಧ ರಾಹುಲ್ ಗಾಂಧಿ ಮಾತನಾಡಲು ಶುರುಮಾಡಿದ್ದೆ ಅನರ್ಹತೆಗೆ ಕಾರಣವಾಗಿದ ಎಂದು ಬೇಸರ ವ್ಯಕ್ತಪಡಿಸಿದರು.

ಅದಾನಿ ಮೋದಿಗೆ ಏನು ಸಂಬಂಧ ಅಂತಾ ಕೇಳುವುದಕ್ಕೆ ಶುರು ಮಾಡಿದ್ದರು ಆಗ ಅಸಂವಿಧಾನಿಕ ಪದದ ಲೋಪದೋಷದ ಪದ ಹುಡುಕಿ ತೆಗೆದರು ಅದರ ಮೇಲೆ ಸದಸ್ಯತ್ವ ಅನರ್ಹ ಮಾಡಿದ್ದಾರೆ ಇದನ್ನೆಲ್ಲ ಇಡೀ ಭಾರತ ದೇಶ ನೋಡುತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಇದು ನನಗೆ ನಂಬಿಕೆ ಇದೆ ಸಂತೋಷ್ ಲಾಡ್ ತಿಳಿಸಿದರು.

- Advertisement -

Latest Posts

Don't Miss