Hubballi News : ರಾಜ್ಯದ ಹಲವೆಡೆ ನಿರಂತರ ಮಳೆಯಾಗುತ್ತಿದ್ದು ಜನರ ಜೀವನ ಹೈರಾಣಾಗಿದೆ. ಹುಬ್ಬಳ್ಳಿ ದಾರವಾಡ ಅವಳಿ ನಗರಗಳ ಪರಿಸ್ಥಿತಿ ಕೂಡಾ ಅವಾಂತರವಾಗುತ್ತಿದೆ.
ಈ ವಿಚಾರವಾಗಿ ಹುಬ್ಬಳ್ಳಿ ಯಲ್ಲಿ ಸಚಿವ ಸಂತೋಷ್ ಲಾಡ್ ಸಿಎಂ ಸಿದ್ದರಾಮಯ್ಯರ ಜೊತೆ ವಿಸಿ ಮೂಲಕ ಸಭೆ ನಡೆಸಲಾಗಿದೆ. ಸಭೆಯಲ್ಲಿ ಅದರಲ್ಲಿ ಮುಖ್ಯವಾಗಿ ರೈತರ ಜೀವಹಾನಿಯ ಬಗ್ಗೆ ವಿಶೇಷವಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯಾದ್ಯಂತ ರೈತರ ಆತ್ಮಹತ್ಯೆಗಳು ಆಗದಂತೆ ತಡೆಗಟ್ಟವುದು ನಮ್ಮ ಉದ್ದೇಶವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಬೆಲಹಾನಿಯ ಬಗ್ಗೆ ಸಮೀಕ್ಷೆಗಳು ನಡೆಯುತ್ತಿದೆ. ಈ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಸಿಗಬೇಕಿದೆ. ಅದರ ಜೊತೆ ಜಾನುವಾರುಗಳ ಹಾನಿಯಾಗಿದೆ, ರಸ್ತೆಗಳು ಹಾಳಾಗಿವೆ. ಜಿಲ್ಲೆಯಲ್ಲಿ ಯಾವುದೇ ರೀತಿ ಜೀವ ಹಾನಿಯಾಗಿಲ್ಲ. ಎಂಬುವುದಾಗಿ ಹೇಳಿದ್ದಾರೆ.
ಇನ್ನು ಶಾಸಕರು ಮುಖ್ಯಮಂತ್ರಿಗಳಿಗೆ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಸಚಿವ ಸಂತೋಷ್ ಲಾಡ್ ನಾಳೆ ಮುಖ್ಯಮಂತ್ರಿಗಳು ಈ ಬಗ್ಗೆ ಶಾಸಕಾಂಗ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ವಿಪಕ್ಷ ನಾಯಕ ಕಚೇರಿ ಉದ್ಘಾಟನೆಯಲ್ಲಿ ಬಾಡೂಟ ವಿಚಾರವಾಗಿ ಮಾತನಾಡಿ ಬಾಡೂಟ ಮಾಡಿಸಬಾರದೆಂದು ಎಲ್ಲಿ ಇಲ್ಲ ಊಟ ಮಾಡಿಸಲು ಅನುಮತಿ ಇದೆ, ಬಾಡೂಟಕ್ಕೆ ಏನ್ ಸಮಸ್ಯೆ..? ನಾನ್‌ವೆಜ್ ತಿನ್ನಬಾರದೆಂದು ಎಲ್ಲಿ ಇಲ್ಲ ಎಂಬುವುದಾಗಿ ಹೇಳಿದರು.
ಜೊತೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ವಿರೋಧ ನಾಯಕಿ ಅಧಿಕಾರಿಗಳ ಮಾತು ಕೇಳುತ್ತಿಲ್ಲ ಆರೋಪ ವಿಚಾರವಾಗಿ ಮಾತನಾಡಿ ಆಡಳಿತ ವ್ಯವಸ್ಥೆಯಲ್ಲಿ ಇದೆಲ್ಲ ಸಾಮಾನ್ಯ ಇದನ್ನ ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತೇವಿ. ಕೆಲವು ಸಂದರ್ಭಗಳಲ್ಲಿ ಅವರು ಮಾತು ಕೇಳಲಿಕ್ಕಿಲ್ಲ. ಈ ವಿಚಾರಗಳ ತಿಳಿಸಿ ಸರಿಮಾಡಲಾಗುತ್ತದೆ. ಎಂದು ಹೇಳಿದರು.
Gruha laxmi:ಗೃಹ ಲಕ್ಷ್ಮೀ ಯೋಜನೆ ನೊಂದಾವಣೆ ಕೇಂದ್ರ ಕುರಿತು ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ:
DKS City rounds: ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ರೌಂಡ್ಸ್
Brand bengalore: ಜನಹಿತ ಮತ್ತು ಆಕರ್ಷಕ ಬೆಂಗಳೂರು ವಿಷಯಕ್ಕೆ ರಚಿಸಿರುವ ಪ್ರತ್ಯೇಕ ಸಮಿತಿ ಜೊತೆ ಸಭೆ: