ಧಾರವಾಡ:ಬಿಜೆಪಿ ನಾಯಕರಿಗೆ ಹೇಳಿಕೊಳ್ಳುವ ಕೆಲಸ ಏನು ಇಲ್ಲಾ. ಹೀಗಾಗಿ ರಾಜ್ಯ ಕಾಂಗ್ರೆಸದ ಬಗ್ಗೆ ಟೀಕೆ ಕಾಂಟವರ್ಸಿ ಮಾಡುತ್ತಾ ಕಾಲಹರಣ ಮಾಡ್ತಾ ಇದ್ದಾರೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದ್ರು.
ಯಾತ್ನಾಳ ಅವರು ಸರ್ಕಾರ ಕೆವಲ 6 ತಿಂಗಳು ಇರ್ತಾರೆ ಅಂತೀದಾರೆ. ಅವರ ಭವಿಷ್ಯವಾಣಿ ಅವರಿಂದಲೇ ಕೇಳಬೇಕು. ಬಿಜೆಪಿ ನಾಯಕರು ಹತಾಶೆಯಾಗಿ ಹೋಗಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ರು.
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಕುಂದಗೋಳ ಮಾಜಿ ಶಾಸಕ ಎಸ್..ಚಿಕ್ಕನಗೌಡ್ರ ಕಾಂಗ್ರೆಸಗೆ ಬಂದ್ರೆ ಸ್ವಾಗತ- ಸಚಿವ ಸಂತೋಷ ಲಾಡ್
ಧಾರವಾಡ-ಧಾರವಾಡ ಜಿಲ್ಲೆಯಲ್ಲಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಾಂಗ್ರೆಸಗೆ ಬಂದ್ರೆ ಸ್ವಾಗತ. ಅವರು ಕಾಂಗ್ರೆಸ ಎಂಪಿ ಅಭ್ಯರ್ಥಿಯಾಗ್ತಾರೆ ಎನ್ನುವ ಸುದ್ದಿ ಇದೆ. ಹಾಗೇನೆ ಕುಂದಗೋಳದ ಮಾಜಿ ಶಾಸಕ. ಎಸ.ಐ.ಚಿಕ್ಕನಗೌಡ್ರ. ಬಿಜೆಪಿ ಬಿಟ್ಟು ಕಾಂಗ್ರೆಸ ಸೇರ್ತಾರೆ ಎನ್ನುವ ಸುದ್ದಿ ಇದೆ ಧಾರವಾಡ ಜಿಲ್ಲೆಯಲ್ಲಿ ಪಕ್ಷದ ಸಿದ್ಧಾಂತವನ್ನು ನಂಬಿ ಯಾರೇ ಬಂದ್ರೆ ಎಲ್ಲಾ ನಾಯಕರಿಗೂ ಸ್ವಾಗತ ಕೋರುವೆ ಎಂದು ಸಚಿವ ಸಂತೋಷ ಲಾಡ ಹೇಳಿದ್ರು.
7-8 ತಿಂಗಳಲ್ಲಿ ಎಂಪಿ ಚುನಾವಣೆ ನಡೆಯಲಿದ್ದು, ನನಗೆ ಈ ಬಗ್ಗೆ ಇಂಟರೆಸ್ಟ್ ಇಲ್ಲಾ. ಒಂದು ವೇಳೆ ಹೈಕಮಾಂಡ ಸೂಚನೆ ಕೊಟ್ಟರೆ, ನಾನು ನಿಲ್ಲಬೇಕಾಗುತ್ತೆ ಎಂದು ಸಚಿವ ಸಂತೋಷ ಲಾಡ ಹೇಳಿದ್ರು.
Jagadish Shetter: ಅಡುಗೆ ಇದ್ದಾಗ ಶೆಟ್ಟರ್ ಊಟಕ್ಕೆ ಬರ್ತಾರೆ ಎಂಬ ವಿಚಾರಕ್ಕೆ ತಿರುಗೇಟು ನೀಡಿದ ಶೆಟ್ಟರ್
Narendra Modi : ಕೆಂಪುಕೋಟೆಯಲ್ಲಿ 10ನೇ ಬಾರಿಗೆ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ