ಧಾರವಾಡ :ಧಾರವಾಡದ ಡಿಡಿಪಿಐ ಕಚೇರಿಗೆ ದಿಢೀರ್ ಭೇಟಿ ನೀಡಿದಂತ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಶಾಲಾ ಕಟ್ಟಡಗಳನ್ನು ಪರಿಶೀಲನೆ ಮಾಡಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ಕಟ್ಟಡ ಹಳೆಯದಾದರೂ ತುಂಬಾ ಉತ್ತಮ ಸ್ಥಿತಿಯಲ್ಲಿದೆ ಅವ್ರು ಮತ್ತು ನಾವು ಬೇರೆ ಬೇರೆ ಜವಾಬ್ದಾರಿಯಲ್ಲಿ ಕೆಲ್ಸ ಮಾಡುವವರು ನಮಗೇನು ಎಕ್ಸ್ಟ್ರಾ ಕೊಂಬು ಇರಲ್ಲ, ಮಿನಿಸ್ಟರ್ ಅಂತ ಎಲ್ಲರೂ ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುವವರು ನಾವು ಡಿಡಿಪಿಐ ಯವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ.
ಅವರ ವಿರುದ್ಧ ಯಾವುದೇ ರೀತಿಯ ಆರೋಪ ಬಂದಿಲ್ಲ ಶಿಥಿಲಗೊಂಡ ಶಾಲೆಗಳ ಹಿನ್ನೆಲೆ ಎನ್ ಡಿ ಆರ್ ಎಫ್ ನಲ್ಲಿ ಹಣ ಬಿಡುಗಡೆ ಆಗುತ್ತಿದೆ, ಅದರ ಮೇಲೆ ಯಾವ್ಯಾವುದು ಶಿಥಿಲಗೊಂಡಿವೆ ಅಲ್ಲಿ ಮಕ್ಕಳು ಕಲಿಯೋದು ಬೇಡ ಅಂತ ಹೇಳಿದ್ದೇವೆ, ಅವುಗಳನ್ನ ಬೀಳಿಸಿ ಅಲ್ಲಿ ಮತ್ತೊಂದು ಕಟ್ಟಡ ಕಟ್ಟುತ್ತೇವೆ.
ಹೊಸ ಕಟ್ಟಡಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡಬೇಕು. ದುರಸ್ತಿ ಕಾರ್ಯಕ್ಕೆ ಎನ್ ಡಿ ಆರ್ ಎಫ್ ದುಡ್ಡು ಬಿಡುಗಡೆ ಮಾಡ್ತಾರೆ.
Himachala Pradesh: ರಣ ಮಳೆ ಮತ್ತು ಭೂ ಕುಸಿತಕ್ಕೆ ಹಲವಾರು ಜನರ ದುರ್ಮರಣ
Highway: ನಿಯಂತ್ರಣ ತಪ್ಪಿ ಕಾರ ಪಲ್ಟಿ : ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಿಮ್ಮ ತೂಕವನ್ನು ಆರೋಗ್ಯಕರವಾಗಿ ಹೆಚ್ಚಿಸಲು ಈ ನಿಯಮವನ್ನು ಅನುಸರಿಸಿ..