Political News:
ಸ್ಯಾಂಟ್ರೋ ರವಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಯವರು ಬಿಡುಗಡೆ ಮಾಡಿದ್ದಂತಹ ಫೋಟೋಗಳು ಈಗ ಬಾರಿ ಚರ್ಚೆಗೆ ಕಾರಣವಾಗಿವೆ . ಈ ರೀತಿ ಚರ್ಚಗೆ ಕಾರಣವಾಗಲು ಕಾರಣ ಏನೆಂದರೆ ಸ್ಯಾಂಟ್ರೋರವಿಯವರು ಬಿಜೆಪಿ ನಾಯಕರ ಜೊತೆ ತೆಗೆಸಿಕೊಂಡಂತಹ ಫೋಟೋಗಳು ಇವಾಗಿರುವುದರಿಂದ ಬಿಜೆಪಿ ನಾಯಕರು ಸ್ಯಾಂಟ್ರೋರವಿ ವ್ಯವಹಾರದಲ್ಲಿ ಶಾಮಿಲಾಗಿದ್ದಾರ ಎನ್ನುವಂತಹ ಶುರುವಾಗಿದ್ದು ಈಗ ಬಿಜೆಪಿ ನಾಯಕರು ಕುಮಾರಸ್ವಾಮಿ ವಿರುದ್ದ ಕಿಡಿಕಾರುತಿದ್ದಾರೆ.http://“ಸಿದ್ದು ನಿಜ ಕನಸು”ಗಳಿಗೆ ತೀವ್ರ ವಿರೋಧ..!? “ನಮ್ಮ ಕನಸನ್ನು ನನಸಾಗಿಸೋರು ಯಾರು”..?! ರಾಜಕೀಯ ಹೈಡ್ರಾಮಾಕ್ಕೆ ಜನಸಾಮಾನ್ಯರ ಪ್ರಶ್ನೆ..?!
ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿದ್ದವರು ಈ ರಿತಿ ಮಾಡಿದ್ದು ಸರಿಯಲ್ಲ ಇದರ ಬಗ್ಗೆ ಹೇಳಿಕೆ ನೀಡಿದ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು “ನಾನು ಸಾರ್ವಜನಿಕ ಸೇವೆಯಲ್ಲಿ ಇರುವಂತವನು , ದಿನಾಲು ಹಲವಾರು ಜನ ನನ್ನ ಮನೆಗೆ ಬರುತ್ತಾರೆ ತಮ್ಮ ಬೇಡಿಕೆಗಳನ್ನು ಸಲ್ಲಿಸುತ್ತಾರೆ ಪೋಟೋ ತೆಗೆಸಿಕೊಳ್ಳುತ್ತಾರೆ ಅವರಲ್ಲಿ ಸ್ಯಾಂಟ್ರೋ ರವಿ ಒಬ್ಬರು ಆಗಿರಬಹುದು . ಅದನ್ನೇ ಬಂಡವಾಳವಾಗಿ ಉಪಯೋಗಿಸಿಕೊಳ್ಳುತ್ತಿರುವ ಕುಮಾರಸ್ವಾಮಿಯವರು ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಚುನಾವಣ ಗಿಮಿಕ್ ಆಗಿ ಬಳೆಸಿಕೊಳ್ಳುತ್ತಿದ್ದಾರೆ. ಈಗಾಗಲೆ ಸ್ಯಾಂಟ್ರೋ ರವಿ ಬಗ್ಗೆ ತನಿಕೆ ಮಾಡಲು ಮೈಸೂರಿನ ಕಮಿಷನರ್ ಮತ್ತು ಡಿಜಿಯವರಿಗೆ ಹೇಳಿದ್ದೇನೆ ,ಅವನನ್ನು ಠಾಣೆಗೆ ಕರೆತಂದು ಅವನು ಯಾರು ,ಅವನ ಹಿನ್ನೆಲೆ ಏನು ,ಯಾರ್ಯಾರಿಗೆ ಬ್ಲ್ಯಾಕೆ ಮೇಲ್ ಮಾಡುತಿದ್ದಾನೆ . ಎಲ್ಲದರ ಬಗ್ಗೆನು ಸರಿಯಾದ ರೀತಿಯಲ್ಲಿ ವಿಚಾರಣೆ ನಡೆಸಬೇಕೆಂದು ಸೂಚಿಸಿದ್ದೇನೆ. ನನ್ನ ಜೊತೆ ಇರುವಂತಹ ಪೋಟೋವನ್ನು ತೋರಿಸಿ ನನ್ನ ತೇಜೋವಧವಗೆ ಕಾರಣವಾಗಿದ್ದಾರೆ . ಇದರಿಂದ ಅವರಿಗೆ ಆಗುವಂತಹ ಲಾಭ ಏನು ಎಂಬುದು ತಿಳಿಯುತ್ತಿಲ್ಲ.ನನ್ನ ಮನೆಗೆ ಬಂದಂತಹ ಯಾರು ಸಹ ನನಗೆ ಹಣದ ಆಮಿಷ ಒಡ್ಡುವಂತಹ ದೈರ್ಯ ಯಾರು ಸಹ ಮಾಡಿಲ್ಲ. “ಎಂದು ತಿಳಿಸಿದರು .
ಇನ್ನು ಈ ಪ್ರಕರಣದಲ್ಲಿ ಯಾರೆಲ್ಲ ಶಾಮಿಲಾಗಿದ್ದಾರೆ, ಶಾಮಿಲಾದವರು ಯಾವ ರೀತಿ ಸ್ಯಾಂಟ್ರೋ ರವಿ ವ್ಯವಹಾರದಲ್ಲಿ ಯಾವ ರೀತಿ ಸಹಕಾರ ನೀಡಿದ್ದಾರೆ ಇನ್ನೂ ಯಾವ ರೀತಿ ತಿರುವು ಪಡೆದಿಕೊಳ್ಳುತ್ತೇ ಅನ್ನುವುದನ್ನು ಕಾದು ನೋಡಬೇಕಿದೆ.
ತಾಯಿ ಮೇಲೆ ಆಣೆ ಮಾಡಿ ಕೊಟ್ಟ ಮಾತು ತಪ್ಪಿದ್ದಾರೆ ಸಿಎಂ..!? ಸರಕಾರಕ್ಕೆ ಮತ್ತೆ ಎಚ್ಚರಿಕೆ ನೀಡಿದ ಸ್ವಾಮೀಜಿ..!