www.karnatakatv.net : ಬೆಂಗಳೂರು : ಕಿರಿಕ್ ಪಾರ್ಟಿಯಿಂದ ಭಾರಿ ಹೆಸರನ್ನು ಮಾಡಿದ ನಟ ರಕ್ಷಿತ್ ಶೆಟ್ಟಿ ಅವರು ಅಭಿನಯಿಸಿದ ‘ಸಪ್ತ ಸಾಗರದಾಚೆ ಎಲ್ಲೋ ‘ ಚಿತ್ರದ ಚಿತ್ರೀಕರಣ ಮತ್ತೆ ಆರಂಭವಾಗಿದೆ. ಇದೀಗ ಸುಮಾರು 35 ದಿನಗಳ ಕಾಲ ಎರಡನೇ ಅಂತದ ಚಿತ್ರಿಕರಣ ಮಾಡಲು ಚಿತ್ರತಂಡವು ಪ್ಲ್ಯಾನ್ ಮಾಡಿಕೊಂಡಿದೆ. ಹಾಗೇ 21 ದಿನಗಳ ಕಾಲ ಮೊದಲನೆ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಅದಾದ ಬಳಿಕ ಎರಡನೆ ಹಂತದ ಚಿತ್ರೀಕರಣಕ್ಕೆ ಸಿದ್ದತೆಯನ್ನು ಮಾಡಿಕೊಂಡಿದೆ.
ಎರಡನೆ ಹಂತದ ಚಿತ್ರಿಕರಣದ ವೇಳೆ ಕೋರೊನಾದ ಅಬ್ಬರ ಜೋರಾಗಿದ್ದುದರಿಂದ ಲಾಕ್ ಡೌನ್ ಘೋಷನೆ ಮಾಡಲಾಗಿತ್ತು ಆಗ ಚಿತ್ರದ ಚಿತ್ರೀಕರಣವನ್ನು ಅಲ್ಲೆ ನಿಲ್ಲಿಸಲಾಗಿತ್ತು ಈಗ ಮತ್ತೆ ಚಿತ್ರ ತಂಡವು ಚಿತ್ರೀಕರಣಕ್ಕೆ ಸಜ್ಜಾಗಿದೆ. ಹಿಂದೆ ‘ ಗೋಧಿ ಬಣ್ಣ ಸಾಧಾರಣ ಮೈಕಟ್ಟು’ , ಕವಲುದಾರಿ’ ಚಿತ್ರಗಳನ್ನು ನಿರ್ದೇಶಿಸಿದ ಹೇಮಂತ್ ರಾವ್ ಈ ಚಿತ್ರದ ನಿರ್ದೇಶನವನ್ನು ಮಾಡುತ್ತಿದ್ದಾರೆ.
ಈ ಚಿತ್ರದ ಬಗ್ಗೆ ಮಾತನಾಡಿದ ಹೇಮಂತ್ ರಾವ್ ಅವರು ಬೆಂಗಳೂರಿನ ಸುತ್ತ ಮುತ್ತಲು 35% ನಷ್ಟು ಚಿತ್ರೀಕರಣವನ್ನು ಮಾಡಿದ್ದೆವೆ. ಎಲ್ಲಾ ಮುಂಜಾಗರು ಕತೆ ವಹಿಸಿ , ನಿಯಮವನ್ನು ಪಾಲಿಸಿ ಮೊದಲನೆ ಹಂತದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೆವೆ. ಸದ್ಯ ಕೋವಿಡ್ ಭಯ ಮತ್ತು ಲಾಕ್ ಡೌನ್ ನಿಂದ ಶೂಟಿಂಗ್ ನಿಲ್ಲಿಸಿದ್ದೆವು ಈಗ ಮತ್ತೆ ಆರಂಭವಾಗಿದೆ ಎನ್ನುತ್ತಾರೆ. ಇನ್ನೂ ಈ ಚಿತ್ರದ ನಾಯಕ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ರುಕ್ಮಿಣಿಯವರು ಕಾಣಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ವಿನುತಾ ಹವಾಲ್ದಾರ್ ಕರ್ನಾಟಕ ಟಿವಿ ಬೆಂಗಳೂರು