ಮಂಡ್ಯ: ಕೆ.ಆರ್.ಪೇಟೆ ತಾಲ್ಲೂಕಿನ ಸಾಸಲು ಗ್ರಾಮದ ಮುಜರಾಯಿ ದೇವಾಲಯಗಳಲ್ಲಿ ಅಭಿವೃದ್ಧಿ ಮತ್ತು ನಿರ್ವಹಣೆ ಹೆಸರಿನಲ್ಲಿ ಲಕ್ಷಾಂತರ ಹಣ ಪಂಗನಾಮದ ಆರೋಪ ಕೇಳಿಬಂದಿದೆ. ಗ್ರಾಮಸ್ಥರು ಸೂಕ್ತ ತನಿಖೆಯನ್ನು ಆಗ್ರಹಿಸುತ್ತಿದ್ದಾರೆ.
ಸಾಸಲು ಶ್ರೀ ಶಂಭುಲಿಂಗೇಶ್ವರ ಹಾಗೂ ಸೋಮೇಶ್ವರ ದೇವಾಲಯಗಳು ‘ಬೈಲಿಸೀಮೆಯ ಕುಕ್ಕೆ’ ಎಂದೇ ಪ್ರಸಿದ್ಧ. ಇಲ್ಲಿ ದೇವಾಲಯದ ಅಭಿವೃದ್ಧಿ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ 80 ಲಕ್ಷಕ್ಕೂ ಹೆಚ್ಚು ಹಣ ದುರುಪಯೋಗ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಯಾವುದೇ ನೈಜ ಕಾಮಗಾರಿಗಳಿಲ್ಲದೇ ದಾಖಲೆಗಳಲ್ಲಿ ದೊಡ್ಡ ಮೊತ್ತದ ಖರ್ಚು ತೋರಿಸಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ.
ಇದರಲ್ಲಿ ಸ್ಥಳೀಯ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೇ ಭಾಗಿಯಾಗಿದ್ದಾರೆ ಎಂಬ ದೂರವೂ ಕೇಳಿಬರುತ್ತಿದೆ. ಲೂಟಿ ವಿರೋಧವಾಗಿ ಧ್ವನಿ ಎತ್ತಿದ ಕೆಲವರಿಗೆ FIR ಬೆದರಿಕೆ ನೀಡಲಾಗಿದೆ ಎನ್ನಲಾಗಿದೆ. ದೇವಾಲಯದ ಹಣಕಾಸು ದಾಖಲೆಗಳ ಪರಿಶೀಲನೆ ಮತ್ತು ಜವಾಬ್ದಾರರ ವಿರುದ್ಧ ಕಠಿಣ ಕ್ರಮಕ್ಕೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

