Tuesday, December 24, 2024

Latest Posts

ಚೊಚ್ಚಲ ಕಾಲಿವುಡ್ ಸಿನಿಮಾ ಶೂಟಿಂಗ್ ಮುಗಿಸಿದ ನೀನಾಸಂ ಸತೀಶ್

- Advertisement -

ಸ್ಯಾಂಡಲ್ ವುಡ್ ಅಂಗಳದಿಂದ ಕಾಲಿವುಡ್ ಅಂಗಳಕ್ಕೂ ಎಂಟ್ರಿ ಕೊಟ್ಟಿದ್ದ ಕ್ವಾಟ್ಲೆ ಸತೀಶ ತಮ್ಮ ಚೊಚ್ಚಲ‌ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ. ಪಗೈವಾನುಕು ಅರುಲ್ವಾಯ್ ಎಂಬ ತಮಿಳು ಸಿನಿಮಾದ ಸೆಕೆಂಡ್ ಶೆಡ್ಯೂಲ್ ನ್ನ‌ ಈ ವರ್ಷದ ಆರಂಭದಲ್ಲಿ ಶುರುಮಾಡಿದ್ದರು. ಇದೀಗ ಈ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ.

ಚಿತ್ರೀಕರಣ ಕಂಪ್ಲೀಟ್ ಆಗಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೀನಾಸಂ ಸತೀಶ್ ಹೇಳಿಕೊಂಡಿದ್ದು,ಸಿನಿಮಾ ಟೀಂ ಜೊತೆಗಿನ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಖ್ಯಾತ ನಟ ಶಶಿಕುಮಾರ್ ಮೇನ್ ಲೀಡ್ ರೋಲ್ ನಲ್ಲಿ ನಟಿಸ್ತಿದ್ದು, ಸತೀಶ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಬಿಂದು ಮಾಧವಿ ಹಾಗೂ ವಾಣಿ ಭೋಜನ್ ಕೂಡ ನಟಿಸಿದ್ದಾರೆ.

- Advertisement -

Latest Posts

Don't Miss