Sunday, September 8, 2024

Latest Posts

Bigboss :ಪ್ರದೀಪ್ ಈಶ್ವರ್ ಒಬ್ಬ ಟ್ಯೂಷನ್ ಮಾಸ್ಟರ್ ಅದು ಅವರ ವೃತ್ತಿ; ಜಾರಕಿಹೊಳಿ;

- Advertisement -

ಚಿಕ್ಕೋಡಿ: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಪ್ರವೇಶ ಮಾಡಿದ್ದರ ಕುರಿತು ಮಾಧ್ಯಮದವರು ಚಿಕ್ಕೋಡಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಬರಗಾಲದ ಸಮಯದಲ್ಲಿ ಪ್ರದೀಪ್ ಅವರಿಗೆ ಬಿಗ್ ಬಾಸ್ ಮನೆಗೆ ಪ್ರವೇಶ ಅವಶ್ಯಕತೆ ಇತ್ತಾ ಎಂಬ ಪ್ರಶ್ನೆಗೆ ಸಚಿವರು ಪ್ರತಿಕ್ರಿಸಿದ್ದಾರೆ.

ಅದು ಅವರ ವೈಯಕ್ತಿಕ ವಿಚಾರ ಮೇಲಾಗಿ ಅವರೊಬ್ಬ ಟ್ಯೂಷನ್ ಮಾಸ್ಟರ್ ಅದು ಅವರ ವೃತ್ತಿ ಅದಕ್ಕೂ ಇದಕ್ಕೂ ಏನೂ ಸಂಬಂಧವಿಲ್ಲ ಅವರದ್ದೇ ಆದ ಪ್ರೊಫೇಷನ್ ಇರುತ್ತೆ ಅದಕ್ಕೆ ನಾವು ಕಾಮೆಂಟ್ ಮಾಡೋಕಾಗಲ್ಲ ಎಂದು ಸಚಿವರು ಉತ್ತರಿಸಿದರು.

ಕಾಮಗಾರಿ ಮುಗಿಸಿದ ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸದೆ ಪೆಂಡಿಂಗ್ ಇಟ್ಟಿರುವುದಕ್ಕಾಗಿ ಸಚಿವರನ್ನು ಪ್ರಶ್ನಿಸಿದಾಗ ಅವರು ಉಳಿಸಿ ಹೋದವರು ಯಾರು? ಅದನ್ನ ಕೇಳಬೇಕು. ನಾವು ಉಳಿಸಿದ್ರೆ ಐದು ವರ್ಷಗಳ ನಂತರ ಆ ಪ್ರಶ್ನೆ ಕೇಳಿ, ಈಗ ಬಿಜೆಪಿಯವರನ್ನ ಪ್ರಶ್ನೆ ಮಾಡಬೇಕು. ಪಿಡಬ್ಲ್ಯೂಡಿ ಇಲಾಖೆಯಲ್ಲಿ 6 ಸಾವಿರ ಕೋಟಿ, ನೀರಾವರಿ ಇಲಾಖೆಯಲ್ಲಿ 12 ಸಾವಿರ ಕೋಟಿ ಇದೆ ಇದನ್ನು ಉಳಿಸಿ ಹೋದವರು ಬಿಜೆಪಿಯವರು, ನಮ್ಮನ್ನು ಕೇಳಿದ್ರೆ ಏನ್ ಉತ್ತರ ಕೊಡೋದು ಎಂದು ಸಚಿವ ಜಾರಕಿಹೊಳಿ ಹೇಳಿಕೆ ನೀಡಿದರು.

ಕ್ಷೇತ್ರಕ್ಕೆ ಅನುದಾನ ಸಿಗದ ಕಾರಣ ಶಾಸಕ ರಾಜು ಕಾಗೆ ಅಸಮದಾನ ಆಗಿರುವ ವಿಚಾರಕ್ಕೆ. ಟೈಮ್ ತೆಗೆದುಕೊಳ್ಳುತ್ತೆ ಬರುತ್ತೆ, ಡಿಸೆಂಬರ್‌ಲ್ಲಿ ಕೆಲಸ ಆರಂಭ ಆಗುತ್ತೆ, ನಮ್ಮ ಇಲಾಖೆ ಈಗಾಗಲೇ ಅನುದಾನ ನೀಡಲು ಪ್ರಾರಂಭ ಮಾಡಿದೆ, ಬೇರೆ ಬೇರೆ ಇಲಾಖೆಗಳದ್ದು ಡಿಸೆಂಬರ್‌ ವೇಳೆಗೆ ಕೊಡ್ತಾರೆ,

ಚಿಕ್ಕೋಡಿ ಉಪವಿಭಾಗ ಏತನೀರಾವರಿ ಯೋಜನೆಗಳು ಜಾರಿಯಾಗದ ವಿಚಾರ:  ಹಿಂದಿನ ಸರ್ಕಾರದಲ್ಲಿ ಆಗಬೇಕಾಗಿತ್ತು, ನಾವು 2013ರಲ್ಲಿ ಚಾಲನೆ ನೀಡಿ ಹಣ ನೀಡಿದ್ವಿ,ಆದ್ರೆ ಹಿಂದಿನ ಐದು ವರ್ಷ ಅವಧಿಯಲ್ಲಿ ಏನೂ ಪ್ರಗತಿ ಆಗಲಿಲ್ಲ, ನಮ್ಮ ಮೇಲೆ ಜವಾಬ್ದಾರಿ ಇದ್ದು ಅದನ್ನ ಮುಗಿಸುವ ಪ್ರಯತ್ನ ಮಾಡ್ತೀವಿ.

ರಾಯಬಾಗ ಉನ್ನತ ಮಟ್ಟದ ಕಾಲುವೆಗೆ ನೀರು ಬರದ ವಿಚಾರ: 50 ವರ್ಷಗಳ ಹಿಂದೆ ಯೋಜನೆ ಡಿಸೈನ್ ಆಗಿದೆ, ಆಗ 2 ಲಕ್ಷ ಹೆಕ್ಟೇರ್ ‌ನೀರಾವರಿ ಯೋಜನೆ ಇತ್ತು ಈಗ ಮೂರು ಲಕ್ಷ ಹೆಕ್ಟೇರ್ ಆಗಿದೆ ಒಂದು ಲಕ್ಷ ಹೆಕ್ಟೇರ್ ಹೆಚ್ಚಾಗಿದ್ದರಿಂದ ಮುಂದೆ ನೀರು ಬಿಡೋದು ಸಮಸ್ಯೆ ಆಗಿದೆ ಕೃಷ್ಣಾ ನದಿ ನೀರು ತರುವ ಬಗ್ಗೆ ಚರ್ಚೆ ಇಲ್ಲ ಅದಕ್ಕೆ ಬೇರೆ ಯೋಜನೆ ಮಾಡ್ತೀವಿ ಎಂದ ಸತೀಶ್ ಜಾರಕಿಹೊಳಿ ಮಾದ್ಯಮದವರಿಗೆ ಉತ್ತರಿಸಿದರು.

2A Reservation: ಮೀಸಲಾತಿಗಾಗಿ ಇಷ್ಟಲಿಂಗ ಪೂಜೆ ಮಾಡಿ ಪ್ರತಿಭಟನೆ ಕೈಗೊಳ್ಳುತ್ತೇವೆ. ಜಯಮೃತ್ಯುಂಜಯ ಸ್ವಾಮಿಜಿ..!

ರಸ್ತೆಯ ಮಧ್ಯೆ ಎತ್ತಿನಗಾಡಿ ನಿಲ್ಲಿಸಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಕೈಗೊಂಡ ರೈತರು..!

ಸಿದ್ದರಾಮಯ್ಯ ಸರ್ಕಾರದಲ್ಲಿ ರೈತರಿಗೆ ರಕ್ಷಣೆ ಇಲ್ಲ; ಅಡಿಕೆ ಬೆಳೆಗಾರರ ಅಳಲು

- Advertisement -

Latest Posts

Don't Miss