ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಸೋಲಿಗೆ ಬೇಕಾದಷ್ಟು ಕಾರಣಗಳಿದ್ದು, ಅಭ್ಯರ್ಥಿ ಆಯ್ಕೆ ತಪ್ಪಿನಿಂದಾಗಿಯೂ ಸೋಲಾಗಿರಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಚುನಾವಣಾ ಫಲಿತಾಂಶದ ಕುರಿತ ಚರ್ಚೆ ತಣ್ಣಗಾಯಿತು ಎನ್ನುವಾಗಲೇ ಜಾರಕಿಹೊಳಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಅಭ್ಯರ್ಥಿ ಆಯ್ಕೆಯಲ್ಲಿ ತಪ್ಪಾಗಿರುವ ಸಾಧ್ಯತೆ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ. ಪಕ್ಷದ ಜಿಲ್ಲಾ ಮುಖಂಡರ ಅಸಹಕಾರವೇ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಸೋಲಿಗೆ ಕಾರಣವಾಯಿತು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಕ್ಟರ್, ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ.ಶಿವ ಕುಮಾರ್ಗೆ ದೂರು ನೀಡಿದ್ದಾರೆ ಎಂಬ ವರದಿಗಳ ಬೆನ್ನಲ್ಲಿ ಜಾರಕಿಹೊಳಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಸ್ಥಳೀಯ ಸನ್ನಿವೇಶ, ಅಲ್ಲಿಯ ವ್ಯವಸ್ಥೆ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ. ಬೆಳಗಾವಿ ಸೋಲಿಗೆ ಕಾರಣ ಸಾಕಷ್ಟಿವೆ ಮತ್ತು ಅದರ ಬಗ್ಗೆ ಚರ್ಚೆಯಾಗಬೇಕಿದೆ ಎಂದು ಹೇಳಿದರು. ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹಿನ್ನಡೆಗೆ ಕಾರಣ ಪತ್ತೆ ಮಾಡಲು ವರಿಷ್ಠರು ಈಗಾಗಲೇ ತಂಡವೊಂದನ್ನು ರಚಿಸಿದ್ದಾರೆ. ಈ ಬೆಳವಣಿಗೆ ನಡುವೆಯೇ ಈ ಬಗ್ಗೆಯೂ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, ಸೋಲಿಗೆ ಸಚಿವರು ಮತ್ತು ಶಾಸಕರನ್ನು ಹೊಣೆ ಮಾಡಲಾಗದು ಎಂದು ಜಾರಕಿಹೊಳಿ ವಾದಿಸಿದರು.
ಚುನಾವಣೆ ಸೋಲನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಏಕೆ ಸೋತಿದ್ದೇವೆ ಎಂಬುದು ಗೊತ್ತಾಗಬೇಕಿದೆ. ಯಾರು ಕೆಲಸ ಮಾಡಿದ್ದಾರೆ ಮತ್ತು ಯಾರು ಮಾಡಿಲ್ಲ ಎಂಬುದೂ ತಿಳಿಯುತ್ತದೆ. ಆದರೆ, ವರದಿ ಬಂದ ಬಳಿಕ ಸರಕಾರದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ ಎಂದು ಹೇಳಿದರು.
Satish Jarkiholi : ಬೆಳಗಾವಿ ಸೋಲಿಗೆ ನಾ ಕಾರಣವಲ್ಲ!
- Advertisement -
- Advertisement -