Wednesday, October 23, 2024

Latest Posts

ಸವದತ್ತಿ ಯಲ್ಲಮ್ಮ ದೇವಾಲಯ ಓಪನ್..!

- Advertisement -

www.karnatakatv.net:ಕೊರೊನಾ ಮಹಾಮಾರಿಯಿಂದ ಎಲ್ಲಾ ದೇಗುಲಗಳು ಕ್ಲೋಸ್ ಆಗಿದ್ವು ಆದ್ರೆ ಈಗ ಕ್ರಮೇಣ ಕೊರೊನಾ ಸೋಂಕು ಕಡಿಮೆ ಆಗುತ್ತಿರುವದರಿಂದ ದೇಗುಲಗಳ ಬಾಗಿಲುಗಳನ್ನು ಓಪೆನ್ ಮಾಡಲಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಿರುವ ರೇಣುಕಾ ಯಲ್ಲಮ್ಮ ದೇವಾಲಯಗದ ಬಾಗಿಲನ್ನು ತೆರೆದಿದ್ದಾರೆ. ಕೊರೊನಾ ಸೋಂಕು ಹರಡುವ ಪರಿಣಾಮವಾಗಿ ಮುಚ್ಚಿರು ದೇಗುಲ ಈಗ ಓಪೆಸ್ ಮಾಡಿರುವದಿಂದ ಭಕ್ತರಲ್ಲಿ ಸಂತೋಷವು ಹರಿದು ಬಂದಿದೆ. ಉತ್ತರ ಕರ್ನಾಟಕದ ಪ್ರಮುಖ ದೇವಾಲಯ ಇದಾಗಿದ್ದು, ಯಲ್ಲಮ್ಮ ದೇವಿಯ ದರ್ಶನವನ್ನು ಪಡೆಯಲು ಭಕ್ತರಿಗೆ ಅವಕಾಶವನ್ನು ಮಾಡಿಕೊಡಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಆದೇಶವನ್ನು ಹೊರಡಿಸಿದ್ದಾರೆ.  ಸವದತ್ತಿ ಯಲ್ಲಮ್ಮ ದೇವಸ್ಥಾನ ತೆರೆಯುವುದಕ್ಕೆ ಭಕ್ತರು ಕಾತುರದಿಂದ ಕಾಯುತ್ತಿದ್ದರು, ಹಾಗೇ ದರ್ಶನ ಪಡೆಯುವುದಕ್ಕೆ ಮುಗಿಬಿದ್ದಿದ್ದಾರೆ.

ಕೊರೊನಾ ಮಹಾಮಾರಿಯಿಂದ ದೇವಾಲಯದಲ್ಲಿ ಷರತ್ತುಬದ್ಧ ಅನುಮತಿಯನ್ನು ಹೊರಡಿಸಿದ್ದು, ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದು ಮತ್ತು ಉತ್ಸವ, ಜಾತ್ರೆಯನ್ನು ನಡೆಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಎಲ್ಲಾ ಭಕ್ತರು ಕೊವಿಡ್ ನಿಯಮವನ್ನು ಪಾಲಿಸಬೇಕು ಅಂತ ಜಿಲ್ಲಾಧಿಕಾರಿ ದೇವಾಲಯದ ಆಡಳಿತ ಮಂಡಳಿಗೆ ಸೂಚನೆಯನ್ನು ನೀಡಿದ್ದಾರೆ. ರೇಣುಕಾ ಯಲ್ಲಮ್ಮ ದೇವಾಲಯವು ಕಳೆದ 18 ತಿಂಗಳಿಂದ ಬಂದ್ ಆಗಿದ್ದು, ಈ ದೇವಸ್ಥಾನಕ್ಕೆ ಮಹಾರಾಷ್ಟ್ರದಿಂದ ಬರುವ ಭಕ್ತರು ತುಂಬಾ ಇದ್ದುದ್ದರಿಂದ ದೇವಾಲಯವನ್ನು ಸಂಪೂರ್ಣ ಕ್ಲೋಸ್ ಮಾಡಲಾಗಿತ್ತು.

ಆದರೆ ಈಗ ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿ ಕೊರೊನಾ ಪಾಸಿಟಿವ್ ರೇಟ್ ಕಡಿಮೆಯಾದ ಹಿನ್ನಲೆ ದೇವಸ್ಥಾನದ ಬಾಗಿಲನ್ನು ತೆರೆಯಲು ಅನುಮತಿ ನೀಡಲಾಗಿದೆ.

- Advertisement -

Latest Posts

Don't Miss