Wednesday, August 20, 2025

Latest Posts

ಅಂಬಾಸಿಡರ್‌ ಕಾರಲ್ಲಿ ಹೆಣ ಕಣ್ಣಾರೆ ಕಂಡಿದ್ದೇನೆ.. ಕ್ಲೈಮ್ಯಾಕ್ಸ್‌ಗೆ ಟ್ವಿಸ್ಟ್!

- Advertisement -

ಧರ್ಮಸ್ಥಳದ ನಿಗೂಢ ಸಾವುಗಳ ಕೇಸ್‌ ಕ್ಲೈಮ್ಯಾಕ್ಸ್‌ ತಲುಪಿದ್ರು, ಹೊಸ ಹೊಸ ಟ್ವಿಸ್ಟ್‌ ಸಿಕ್ತಿವೆ. ಭೀಮನ ಬಳಿಕ ಹಲವಾರು ಮಂದಿ ದೂರು ನೀಡೋಕೆ ಮುಂದೆ ಬಂದಿದ್ದಾರೆ. ಈಗಾಗಲೇ ಕೆಲವರು ಹಳೇ ಪ್ರಕರಣಗಳ ತನಿಖೆಗೆ, ಮವಿ ಮಾಡಿದ್ದಾರೆ. ಇನ್ನೂ ಕೆಲವರು ಸಾಕ್ಷಿಯಾಗಿ ತಮ್ಮನ್ನು ಪರಿಗಣಿಸುವಂತೆ ದುಂಬಾಲು ಬಿದ್ದಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಪುರಂದರಗೌಡ್ರು.

ಧರ್ಮಸ್ಥಳ ನಿವಾಸಿಯಾದ ಪುರಂದರಗೌಡ್ರು, ತಾವು ಕಣ್ಣಾರೆ ಕಂಡಿದ್ದನ್ನು ಎಸ್‌ಐಟಿ ಎದುರು ಹೇಳಿದ್ದಾರೆ. ಶೋಧ ಕಾರ್ಯಾಚರಣೆಗೆ ಭೀಮನ ಜೊತೆ, ತಮ್ಮನ್ನು ಸೇರಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾನೆ.

ನಮ್ಮ ಅಂಗಡಿ ಎದುರೇ 1ನೇ ಪಾಯಿಂಟ್‌ ಬರುತ್ತೆ. ನಾನು ಅಂಗಡಿಯಲ್ಲೇ ಕುಳಿತುಕೊಂಡು ನೋಡಿದ್ದೇನೆ. ನಮಗೂ ಆ ಜಾಗಕ್ಕೂ ಸ್ವಲ್ಪವೇ ಅಂತರ. ಸ್ಥಳೀಯರನ್ನು ಹತ್ತಿರ ಹೋಗೋಕೆ ಬಿಡುತ್ತಿರಲಿಲ್ಲ. ಹೂತು ಹಾಕುವ ವೇಳೆ, ಅಧಿಕಾರಿಗಳೂ ಇರಲಿಲ್ಲ.

ಪಾಯಿಂಟ್‌ ನಂಬರ್‌ 1ಕ್ಕೆ, ಅಂಬಾಸಿಡರ್‌ ಕಾರಿನಲ್ಲಿ ಹೆಣ ತೆಗೆದುಕೊಂಡು ಬರೋದನ್ನು, ಒಂದೆರಡು ಸಲ ನೋಡಿದ್ದೇನೆ. ಹಿಂಭಾಗದ ಜಾಗದಲ್ಲಿ ಶೌಚಾಲಯ ಇತ್ತು. ಅಂಗಡಿಯಿಂದ ಹೋಗಬೇಕಾದ್ರೆ ಕೈಗಾಡಿಯಲ್ಲಿ ಹೆಣ ಇತ್ತು. ಒಬ್ಬ ವ್ಯಕ್ತಿ ಅಗೆಯುತ್ತಿದ್ದ. ಡ್ಯಾಂ ಮೇಲ್ಬಾಗದಲ್ಲಿ ಕಾಡಿನ ರೀತಿ ಇತ್ತು. ಹಗಲಿನ ವೇಳೆ ಸ್ವಲ್ಪ ದೂರದಿಂದ ನಾನೇ ನೋಡಿದ್ದೇನೆ.

ನಮ್ಮ ಅಂಗಡಿಗೆ ಬರುತ್ತಿದ್ದ ಕೆಲವರು ಹೇಳ್ತಿದ್ರು. ಕೊಳೆತ ಶವ ಹೂತು ಹಾಕಿರೋದಾಗಿ ಹೇಳಿದ್ದಾರೆ. ಆದರೆ ಆ ಜಾಗವನ್ನು ಗುರುತು ಹಿಡಿಯೋಕೆ ಆಗಲ್ಲ. ಅಲ್ಲೆಲ್ಲಾ ತುಂಬಾ ಡೆವಲಪ್‌ಮೆಂಟ್‌ ಆಗಿದೆ. 2ನೇ ಪಾಯಿಂಟ್‌ನಲ್ಲಿ ಶವ ಹೂತಿದ್ದನ್ನು ನಾನೇ ಕಣ್ಣಾರೆ ನೋಡಿದ್ದೇನೆ. ಅಲ್ಲಿಯೂ ಡೆವಲಪ್‌ಮೆಂಟ್‌ ಆಗಿದೆ. 1 ಮತ್ತು 13ನೇ ನಂಬರ್‌ನಲ್ಲಿ ತುಂಬಾ ಕೆಲಸಗಳಾಗಿವೆ. ಹೀಗಾಗಿ ಜಾಗದಲ್ಲಿ ಸ್ವಲ್ಪ ವ್ಯತ್ಯಾಸ ಆಗಿರಬಹುದು ಅನ್ಸುತ್ತೆ.

ಈಗ ಅದೇನೋ ತಂತ್ರಜ್ಞಾನ ತಂದಿದ್ದಾರಲ್ವಾ? ಬಂಗ್ಲಗುಡ್ಡದ ಸುತ್ತಮುತ್ತ ಒಮ್ಮೆ ಶೋಧ ಮಾಡಲಿ. ಆಗಲಾದ್ರೂ ಏನಾದ್ರೂ ಸಿಗಬಹುದು. ಹೂತು ಹಾಕಿದ ಕೆಲ ವರ್ಷಗಳ ಬಳಿಕ ಅದೇ ಜಾಗ ಅಂತಾ ಹೇಳೋಕೆ ಬರೋದಿಲ್ಲ. ಸಣ್ಣ ವ್ಯತ್ಯಾಸ ಆಗೇ ಆಗುತ್ತದೆ. 10 ಅಡಿ ಜಾಗದಲ್ಲಿ ತೋರಿಸುತ್ತೇನೆ ಅಂದ್ರೆ ಹೇಳೋಕೆ ಬರಲ್ಲ.

ಲಕ್ಷ ದೀಪೋತ್ಸವ ವೇಳೆ ಶೌಚಾಲಯ, ತ್ಯಾಜ್ಯ ಸಂಗ್ರಹಕ್ಕೆ ಗುಂಡಿಗಳನ್ನೂ ತೆಗೆದಿದ್ರು. ಆಗಿನ ಜಾಗಕ್ಕೂ, ಈಗಿನ ಜಾಗಕ್ಕೂ ತುಂಬಾ ವ್ಯತ್ಯಾಸವಿದೆ. 2017ರ ಮೇಲೆ ನಾವು ನೇತ್ರಾವತಿ ಕಡೆ ಹೋಗಿಲ್ಲ. ಅಂಗಡಿ ಹೋದ ಮೇಲೆ ನಾವು ಅಲ್ಲಿಲ್ಲ. ನಮಗೂ ಆ ಜಾಗದ ಬಗ್ಗೆ ಗೊಂದಲ ಇದೆ.

ಪಾಯಿಂಟ್‌ ನಂಬರ್‌ 13ರಲ್ಲೂ ನಾನು ನೋಡಿದ್ದೇನೆ. ಅಲ್ಲಿಯೂ ಅಭಿವೃದ್ಧಿ ಕೆಲಸಗಳು ಆಗಿವೆ. 2018-19ರಲ್ಲಿ ಭಾರೀ ಮಳೆಯಾಗಿತ್ತು. ಆ ಜಾಗದ ಮಣ್ಣನ್ನೆಲ್ಲಾ ಕೊಚ್ಚಿಕೊಂಡು ಹೋಗಿತ್ತು. ಡ್ಯಾಂ ಮೇಲ್ಬಾಗದಲ್ಲಿ ಇಳಿಜಾರು ಇತ್ತು. ಈಗ ಕಟ್ಟೆ ಕಟ್ಟಿದ್ದಾರೆ.

ನಮಗೆ ಹುಟ್ಟಿದಾಗಿನಿಂದಲೇ ಮನೆಯಲ್ಲಿ ಪಾಠ ಮಾಡ್ತಾರೆ. ಧರ್ಮಸ್ಥಳದಲ್ಲಿ ಏನೇ ನಡೆದ್ರೂ ಆ ವಿಚಾರ ಬೇಡ. ಹೆಚ್ಚಾಗಿ ಮಾತನಾಡೋಕೆ ಹೋಗ್ಬೇಡಿ ಅಂತಾ, ನಮ್ಮ ತಂದೆಯವ್ರು ಹೇಳಿದ್ರು. ಮನೆಯವರ ಮಾತನ್ನ ದಾಟಿ ಹೋಗೋಕೆ ನಮಗೆ ಆಗ್ಲಿಲ್ಲ.

ಈ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ಭಯದಿಂದಾಗಿ ಯಾರೂ ಮಾತನಾಡೋದಿಲ್ಲ. ಸೌಜನ್ಯ ವಿಚಾರದ ಬಗ್ಗೆಯೂ ತುಂಬಾ ಜನಕ್ಕೆ ಗೊತ್ತು. ಧರ್ಮಸ್ಥಳದಲ್ಲಿ ಕೆಲಸ ಮಾಡೋರೂ ಇದ್ದಾರೆ. ಆದರೆ ಯಾರೂ ಮಾತನಾಡಲ್ಲ. ಹೀಗಂತ ಎಸ್‌ಐಟಿ ಎದುರು ಕಣ್ಣಾರೆ ಕಂಡ ಸತ್ಯವನ್ನ‌, ಪುರಂದರಗೌಡ್ರು ಬಾಯ್ಬಿಟ್ಟಿದ್ದಾರೆ.

- Advertisement -

Latest Posts

Don't Miss