ಮಸಾಲೆಯುಕ್ತ ಆಹಾರಗಳು, ಕರಿದ ಆಹಾರಗಳು ಮತ್ತು ಜಂಕ್ ಫುಡ್‌ಗಳು ಅಸಿಡಿಟಿಯನ್ನು ಹೆಚ್ಚಿಸುತ್ತದೆ ಎಂಬುದು ನಮಗೆ ಸಾಮಾನ್ಯವಾಗಿ ತಿಳಿದಿರೋ ವಿಷಯ. ಅಸಿಡಿಟಿಗೆ ಔಷಧಿಗಳನ್ನು ಆಶ್ರಯಿಸುವ ಬದಲು ಮನೆಯಲ್ಲಿರುವ ಕೆಲವು ಪದಾರ್ಥಗಳ್ಳನ್ನು ಸೇವಿಸುವುದರಿಂದ ಅಸಿಡಿಟಿಗೆ ಗುಡ್ ಬಾಯ್ ಹೇಳಬಹುದು.
ಈ ಅಸಿಡಿಟಿಯು ಆಮ್ಲೀಯ ಆಹಾರಗಳು, ಹೆಚ್ಚಿನ ಕೊಬ್ಬಿನ, ಕರಿದ ಮತ್ತು ಮಸಾಲೆಯುಕ್ತ ಆಹಾರಗಳನ್ನ ಅತಿಯಾಗಿ ತಿನ್ನುವುದು, ರಕ್ತದೊತ್ತಡದ ಔಷಧಿಗಳು ಮತ್ತು ನಿದ್ರಾಜನಕಗಳಂತಹ ಕೆಲವು ಔಷಧಿಗಳು ಕೂಡ ಕಾರಣವಾಗಿರಬಹುದು. ಹಾಗಾಗಿ ಮನೆಯ ಪದಾರ್ಥಗಳ ಸೇವನೆಯಿಂದ ಅಸಿಡಿಟಿಯನ್ನ ಹೋಗಲಾಡಿಸಬಹುದು.
ಶುಂಠಿಯು ನೈಸರ್ಗಿಕ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಆಸಿಡ್ ರಿಫ್ಲಕ್ಸ್ ರೋಗಲಕ್ಷಣಗಳನ್ನು ಗುಣಪಡಿಸುವ ಶಕ್ತಿಯನ್ನೂ ಕೂಡ ಹೊಂದಿದೆ. ಇದು ಅಜೀರ್ಣ ಮತ್ತು ಹೊಟ್ಟೆ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಶುಂಠಿಯು ಒಟ್ಟಾರೆ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ನಿಮ್ಮ ಹೊಟ್ಟೆಯನ್ನು ತಕ್ಷಣವೇ ಶಮನಗೊಳಿಸಿ, ಆಸಿಡ್ ರಿಫ್ಲಕ್ಸ್ ಅನ್ನು ಕಡಿಮೆ ಮಾಡುತ್ತದೆ.
ಕಚ್ಚಾ ಜೇನುತುಪ್ಪವು ರೋಗನಿರೋಧಕವನ್ನು ಉತ್ತೇಜಿಸುವ ಮತ್ತು ಕ್ಯಾನ್ಸರ್ ವಿರೋಧಿ ಪ್ರಯೋಜನಗಳನ್ನು ಹೊಂದಿದ್ದು, ಆಂಟಿಬ್ಯಾಕ್ಟೀರಿಯಲ್ ವಿರೋಧಿ ಮತ್ತು ಆಂಟಿಫಂಗಲ್ ಶಕ್ತಿಯನ್ನು ಕೂಡ ಹೊಂದಿದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳು ಸಮೃದ್ಧವಾಗಿರುವ ಕಾರಣ ಆಮ್ಲದಿಂದ ಉಂಟಾಗುವ ಗಂಟಲು ನೋವನ್ನು ಶಮನಗೊಳಿಸಲು ಇದನ್ನು ಬಳಸಲಾಗುತ್ತದೆ.
ಹಸಿರು ತರಕಾರಿಗಳು ಮತ್ತು ಬೆಂಡೆಕಾಯಿ ಕರುಳನ್ನು ಹಿತವಾಗಿ ಕಾಪಾಡುತ್ತವೆ. ಇವು ಲೋಳೆಯ ಅಂಶವನ್ನು ಹೊಂದಿರುವ ಕಾರಣ ನಿಮ್ಮ ಹೊಟ್ಟೆಯ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.
ಕಿತ್ತಳೆ, ದ್ರಾಕ್ಷಿಹಣ್ಣು ಅಥವಾ ಬೆರ್ರಿಗಳಂತಹ ಹೆಚ್ಚು ಆಮ್ಲೀಯ ಹಣ್ಣುಗಳನ್ನು ಸೇವನೆ ಮಾಡುವುದರ ಜೊತೆಗೆ ಬಾಳೆಹಣ್ಣು, ಕಲ್ಲಂಗಡಿ ಹಣ್ಣುಗಳನ್ನು ಸೇವನೆ ಮಾಡುವುದು ಹೊಳ್ಳೆಯದು.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ