www.karnatakatv.net: ಕೊರೊನಾ ಮಹಾಮಾರಿಯಿಂದ ದೇಶಾನೆ ತತ್ತರಿಸಿ ಹೋಗಿದ್ದರು ಕೂಡಾ ಅದರ ನಡುವೆ ಶಾಲಾ ಕಾಲೇಜುಗಳನ್ನ ಓಪೇನ್ ಮಾಡಲಾಗಿತ್ತು. ಅದೇ ರೀತಿ ದಸರಾ ನಂತರ 1 ರಿಂದ 5 ನೇ ತರಗತಿಗಳನ್ನು ಓಪೇನ್ ಮಾಡುವುದಾಗಿ ಸೂಚಿಸಿದ್ರು, ಅದು ಸಿಎಂ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ನಿರ್ಧಾರವಾಗಲಿದೆ.
ಕೊರೊನಾ ನಡುವೆಯು 1ರಿಂದ 5 ನೇ ತರಗತಿ ಶಾಲೆಗಳನ್ನ ಪುನರಾರಂಭಿಸಲು ಸಿಎಂ ಅವರು ಸಭೆಯಲ್ಲಿ ನಿರ್ಧರಿಸಲಿದ್ದಾರೆ. ಕೊರೊನಾ ಮಾರ್ಗಸೂಚಿಗಳನ್ನು ಇನ್ನಷ್ಟು ಸರಳೀಕರಣಗೊಳಿಸುವ ಸಂಬoಧ ದಿನಾಂಕ 19 ರಂದು ಮಂಗಳವಾರ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಭೇ ನಡೆಯಲಿದ್ದು, ಈ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಾರಿಗೆ ಸಚಿವ ಶ್ರೀರಾಮುಲು, ಇಲಾಖೆಯ ಅಧಿಕಾರಿಗಳು ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಭಾಗಿಯಾಗಲಿದ್ದಾರೆ. ಇಂತಹ ಸಭೆಯಲ್ಲಿ 1 ರಿಂದ 5ನೇ ತರಗತಿ ಶಾಲೆಗಳ ಆರಂಭ ಕುರಿತ ನಿರ್ಧಾರ ತಿಳಿಸಲಿದ್ದಾರೆ.