Saturday, December 28, 2024

Latest Posts

ಶಾಲಾ ಶಿಕ್ಷಕ ಈಗ ಪರಿಸರ ಪ್ರೇಮಿ..!

- Advertisement -

www.karnatakatv.net :ರಾಯಚೂರು: ಶಾಲಾ ಶಿಕ್ಷಕ ಲಾಕ್ ಡೌನ್ ಸಮಯದಲ್ಲಿ ಶಾಲಾ ಆವರಣದಲ್ಲಿ 10 ಸಾವಿರಕ್ಕಿಂತ ಹೆಚ್ಚು ಸಸಿಗಳನ್ನು ಬೆಳೆಸಿದ್ದಾರೆ.

ಹೌದು, ಶಾಲೆಯ ಶಿಕ್ಷಕ ಅಂದ್ರೆ ಕೇವಲ ಶಾಲೆಗೆ ಹೋಗಿ ಪಾಠವನ್ನು ಮಾಡುವುದು ಅಷ್ಟೇ , ರಜೆ ಸಿಕ್ಕಾಗ ಕುಟುಂಬದವರೊಂದಿಗೆ ಟ್ರಿಪ್ ಮಾಡುವುದು ಅಷ್ಟೇ ಅಂತ ಈ ಕಾಲದಲ್ಲಿ ಇರಬೇಕಾದ್ರೆ. ರಾಯಚೂರಿನಲ್ಲಿ ಒಬ್ಬ ಶಿಕ್ಷಕ ಮಾತ್ರ ಲಾಕ್ ಡೌನ್ ಸಮಯದಲ್ಲಿ ಕೈಕಟ್ಟಿ ಕುಳಿತುಕೊಳ್ಳದೆ ಶಾಲೆಯ ಆವರಣದಲ್ಲಿ  ಸ್ವಂತ ಖರ್ಚಿನಲ್ಲಿ 10 ಸಾವಿರಕಿಂತ ಹೆಚ್ಚು ಸಸಿಗಳನ್ನು ಬೆಳೆಸಿ ಪರಿಸರ ಪ್ರೇಮಿಗೆ ಸಾಕ್ಷಿಯಾಗಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲುಕಿನ ಮುಳ್ಳುರಿನ ಶಾಲೆಯಲ್ಲಿ ಶಿಕ್ಷಕರಾದ ಬಸವರಾಜ 50 ಸಾವಿರ ಸ್ವಂತ ಹಣದಿಂದ 10 ಸಾವಿರ ಸಸಿಗಳನ್ನು ಬೆಳೆಸಿದ ನರ್ಸರಿಗೆ ಶ್ರೀ ಮಲ್ಲಿಕಾರ್ಜುನ ನರ್ಸರಿ ಎಂದು ಹೆಸರಿಡಲಾಗಿದ್ದು, ಅಲ್ಲಿ ಸುಗ್ಗೆ, ಬದಾಮಿ, ಹಲಸು, ಸಿತಾಫಲ, ಓಂಗೆ ಮರ, ಬಂಗಾಳ ಸಸಿ, ಪೇರಲ ಹಾಗೂ ಹಲವಾರು ಹೂವಿನ ಗಿಡಗಳನ್ನು ಸಹ ಬೆಳೆಸಿದ್ದಾರೆ. ಖಾಸಗಿಯಾಗಿ ಯಾರಿಗೂ ಈ ಸಸಿಗಳನ್ನು ಮಾರಾಟ ಮಾಡದೆ ಸರ್ಕಾರಿ ಶಾಲೆಗೆ ಸಸಿಗಳನ್ನು ನೀಡಲು ತೀರ್ಮಾನಿಸಿದ್ದಾರೆ. ಈ ನರ್ಸರಿಗೆ ಊರಿನ ಮುಖಂಡರು, ಸುತ್ತ ಮುತ್ತ ಹಳ್ಳಿ ಜನ ದಿನ ನಿತ್ಯ ಬಂದು ನೋಡಿಕೊಂಡು ಹೋಗುತ್ತಾರೆ.

ತಾವು ಒಬ್ಬರೇ ಮಾಡಿದ ಈ ಕೆಲಸಕ್ಕೆ ಶಿಕ್ಷಣ ಅಧಿಕಾರಿಗಳು, ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕ ವೃಂದ, ಪಾಲಕರ ಸಮೂಹ ಸೇರಿದಂತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿಕ್ಷಕರು ಮನಸ್ಸು ಮಾಡಿದರೆ ಎನ್ ಬೇಕಾದ್ರು ಮಾಡಬಹುದು ಎಂಬುದಕ್ಕೆ ಬಸವರಾಜ ಸಾಕ್ಷಿಯಾಗಿದ್ದಾನೆ.

ಅನಿಲ್‌ಕುಮಾರ್, ಕರ್ನಾಟಕ ಟಿವಿ -ರಾಯಚೂರು

- Advertisement -

Latest Posts

Don't Miss