ಬೆಂಗಳೂರು: 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಅಧಿಕೃತ ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಈ ಪಟ್ಟಿಯಂತೆ ಮೇ.16ರಿಂದಲೇ ಈ ಬಾರಿ 15 ದಿನ ಮೊದಲೇ ಶಾಲೆ ಆರಂಭಗೊಳ್ಳುತ್ತಿದೆ. ಕಲಿಕಾ ಚೇತರಿಕೆ ವಿಶೇಷ ಕಾರ್ಯಕ್ರಮದ ಮೂಲಕ ಶಾಲೆಗಳಲ್ಲಿ ಶಾಲಾ ಚಟುವಟಿಕೆ ಆರಂಭಗೊಳ್ಳುತ್ತಿದ್ದು, ಅಂದೇ ಕ್ಷೀರಭಾಗ್ಯ, ಬಿಸಿಯೂಟ ಕೂಡ ಶುರುವಾಗಲಿದೆ.
ಇನ್ನೂ ಶಾಲಾ ಪ್ರವೇಶಾತಿಯನ್ನು ಮೇ.16ರಿಂದ ಆರಂಭಿಸಿ, ಜುಲೈ 31ರೊಳಗೆ ಮುಕ್ತಾಯಗೊಳಿಸಲು ಸೂಚಿಸಲಾಗಿದೆ. ಶಾಲಾ ಕರ್ತವ್ಯದ ಮೊದಲನೇ ಅವಧಿ ಮೇ 16ರಿಂದ ಆಗಸ್ಟ್ 2ರವರೆಗೆ ಇರಲಿದೆ. 2ನೇ ಅವಧಿಯು 2023ರ ಆಗಸ್ಟ್ 17 ರಿಂದ ಏಪ್ರಿಲ್ 10ರವರೆಗೆ ಇರಲಿದೆ. ಅಕ್ಟೋಬರ್ 3ರಿಂದ 16ರವರೆಗೆ ದಸರಾ ರಜೆ ಇರಲಿದೆ.
ಅಂದಹಾಗೇ ಕಳೆದ 2 ವರ್ಷಗಳಿಂದ ಕೋವಿಡ್ ನಿಂದಾಗಿ ಮಕ್ಕಳು ಕಲಿಕೆಯಿಂದ ವಂಚಿತರಾಗಿರುವುದನ್ನು ಸರಿ ದೂಗಿಸೋ ಕಾರಣಕ್ಕಾಗಿ, ಪ್ರಸಕ್ತ ಸಾಲಿನ ಇಡೀ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಘೋಷಿಸಿರುವ ಇಲಾಖೆಯು ಮೇ 16 ರಿಂದ 30ರವರೆಗೆ ಹಿಂದಿನ ವರ್ಷದ ಕಲಿಕೆಯಲ್ಲಿ ಆಗಿರುವ ಕೊರತೆ ಸರಿದೂಗಿಸುವ ಕಾರ್ಯಮಾಡಬೇಕು. ನಂತ್ರ ಜೂನ್ 1ರಿಂದ ಕಲಿಕಾ ಚೇತರಿಕೆ ಜೊತೆ, ಜೊತೆಗೆ ಪ್ರಸಕ್ತ ವರ್ಷದ ಬೋಧನಾ ಚಟುವಚಿಕೆ ನಡೆಸಲು ಶಿಕ್ಷಕರಿಗೆ ನಿರ್ದೇಶನ ನೀಡಿದೆ.




