www.karnatakatv.net: ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಹಾಗೂ ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ನಡುವೆ ಕೆಪಿಸಿಸಿ ಕಚೇರಿಯಲ್ಲಿ ನಡೆದಿದ್ದ ಪತ್ರಿಕಾಗೋಷ್ಠಿ ಆರಂಭಕ್ಕೂ ಮುನ್ನ ನಡೆದ ಸಂಭಾಷಣೆ ಸದ್ಯ ಡಿಕೆ ಶಿವಕುಮಾರ್ ಬಗ್ಗೆ ನಾನಾ ವಿಚಾರಗಳನ್ನು ಬಹಿರಂಗಗೊಳಿಸಿದೆ,
ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಕರೆದಿದ್ದ ಪತ್ರಿಕಾಗೋಷ್ಠಿಯ ಬಿಡುವಿನ ವೇಳೆ ಆಕಸ್ಮಿಕವಾಗಿ ಸಲೀಂ ಜೊತೆ ಮಾತಿಗಿಳಿದಿದ್ದಾರೆ. ಈ ವೇಳೆ ಈ ಇಬ್ಬರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಗ್ಗೆ ಮಾತನಾಡಿಕೊಳ್ತಿರೋದು ಕ್ಯಾಮರಾದಲ್ಲಿ ಸಂಭಾಷಣೆ ಸಹಿತ ರೆಕರ‍್ಡ್ ಆಗಿದೆ. ಸಲೀಂ ಮತ್ತು ಉಗ್ರಪ್ಪರ ಈ ಪಿಸುದನಿಯ ಸಂಭಾಷಣೆ ಸದ್ಯ ಡಿಕೆಶಿ ಮೇಲೆ ನಾನಾ ಕಳಂಕಗಳನ್ನು ಹೊರಿಸುವಂತಿದೆ.
ಈ ಸಂಭಾಷಣೆಯಲ್ಲಿ ಸಲೀಂ ರ‍್ಸೆಂಟೇಜ್ ಬಗ್ಗೆ ಉಗ್ರಪ್ಪ ಜೊತೆ ರ‍್ಚಿಸಿದ್ದಾರೆ. 10 ರಿಂದ 12 ರ‍್ಸೆಂಟ್ ಮಾಡಿದ್ದಾರೆ, ಡಿಕೆಶಿ ಅಡ್ಜೆಸ್ಟ್ ಮೆಂಟ್ ಮಾಡಿಕೊಂಡಿದ್ದಾರೆ ಅಂತ ಮಾತನಾಡಿಕೊಂಡಿದ್ದಾರೆ.
ಇನ್ನು ತಮ್ಮ ಗುಸುಗುಸು ಮುಂದುವರಿಸಿದ ಸಲೀಂ, ಇದು ದೊಡ್ಡ ಸ್ಕ್ಯಾಮ್. ಕೆದಕಿದರೆ ಇವರದ್ದು ಬರುತ್ತದೆ. ಇವರ ಹುಡುಗರು 50 ರಿಂದ 100 ಕೋಟಿ ಮಾಡಿದ್ದಾರೆ. ಇವನೇ 50, 100 ಮಾಡಿದ್ದಾನೆಂದರೆ ಡಿಕೆ ಹತ್ತಿರ ಎಷ್ಟಿರಬೇಕು ಲೆಕ್ಕಹಾಕಿ. ಅವನು ಬರಿ ಕಲೆಕ್ಷನ್ ಗಿರಾಕಿ ಅಂತ ಸಲೀಂ ಹೇಳಿದ್ರು.
ಇದಕ್ಕೆ ಪ್ರತಿಕ್ರಿಯಿಸಿದ ಉಗ್ರಪ್ಪ, ನಿಮಗೆ ಗೊತ್ತಿಲ್ಲ, ನಾವೆಲ್ಲ ಪಟ್ಟು ಹಿಡಿದು ಡಿಕೆಶಿಯವರನ್ನ ಅಧ್ಯಕ್ಷರನ್ನಾಗಿ ಮಾಡಿಸಿದ್ದು ಅಂತಾರೆ. ಇನ್ನು ಡಿಕೆಶಿ ಮಾತನಾಡುವಾಗ ತೊದಲಿಸಿಬಿಡ್ತಾರೆ, ಅವರಿಗೆ ಲೋ ಬಿಪಿನಾ, ಕುಡುಕರ ರೀತಿ ಅಂತ ಸಲೀಂ ಹಾಸ್ಯ ಮಾಡ್ತಾರೆ. ಅಲ್ಲದೆ ಸಿದ್ದರಾಮಯ್ಯ ಬಾಡಿ ಲಾಂಗ್ವೇಜ್ ಹೇಗಿದೆ. ಖಡಕ್ ಅಂದ್ರೆ ಖಡಕ್ ಅಂತ ಸಲೀಂ ಹೇಳ್ತಾರೆ.
ಇನ್ನು ಡಿ.ಕೆ ಶಿವಕುಮಾರ್ ಮೊನ್ನೆಯಷ್ಟೇ, ಮಾಧ್ಯಮಗಳೆದುರು ಜಲಿಯನ್‌ವಾಲಾ ಬಾಗ್ ಅಂತ ಹೇಳಲು ಹೋಗಿ ತೊದಲಿದ್ದರು. ಅದನ್ನು ಸಿದ್ದರಾಮಯ್ಯ ತಿದ್ದಿದ್ದರು. ಈ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸದ್ಯ ಸಲೀಂ ಹಾಗೂ ಉಗ್ರಪ್ಪ ನಡುವಿನ ಸಂಭಾಷಣೆಯಲ್ಲೂ ಈ ವಿಚಾರ ಉಲ್ಲೇಖಗೊಂಡಿದೆ. ಒಟ್ಟಿನಲ್ಲಿ ಈ ಗುಸುಗುಸು ಮಾತು ಸಹಜವಾಗಿಯೇ ಇದೀಗ ಕಾಂಗ್ರೆಸ್‌ಗೆ ಮುಜುಗರ ತಂದೊಡ್ಡಿದ್ದು, ಈ ಎಲ್ಲಾ ವಿಚಾರಗಳಿಗೆ ಸ್ಪಷ್ಟನೆ ನೀಡಲು ಸದ್ಯ ಡಿಕೆಶಿ ಶೀಘ್ರವೇ ಸುದ್ದಿಗೋಷ್ಟಿ ನಡೆಸಲಿದ್ದಾರೆ.