Thursday, July 31, 2025

Latest Posts

ಪಾಕ್ ಗೆಲುವನ್ನು ಸಂಭ್ರಮಿಸುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು; ಯೋಗಿ ಆದಿತ್ಯನಾಥ್

- Advertisement -

www.karnatakatv.net: T-20 ವಿಶ್ವಕಪ್ ನಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೋಲನು ಭವಿಸಿದೆ. ಇದರಿಂದ ಪಾಕ್ ಗೆಲುವನ್ನು ಸಂಭ್ರಮಿಸುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಮಾಡಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ.

ಈ ಪಂದ್ಯದಲ್ಲಿ ಭಾರತ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದರೂ ಸಹ ಪಾಕಿಸ್ತಾನ್ ಬ್ಯಾಟ್ಸ್ ಮನ್ ಗಳ ಅದ್ಭುತ ಆಟದ ಕಾರಣಕ್ಕೆ ಭಾರತ ಸೋಲನು ಭವಿಸಿತ್ತು. ಈ ಮೂಲಕ ಪಾಕಿಸ್ತಾನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಮೊದಲ ಗೆಲುವು ದಾಖಲಿಸಿದಂತಾಗಿದೆ. ಆದರೆ, ಈ ಪಂದ್ಯದಲ್ಲಿ ಪಾಕಿಸ್ತಾನದ ಗೆಲುವನ್ನು ಭಾರತದಲ್ಲಿ ಕೆಲವರು ಸಂಭ್ರಮಿಸಿದ್ದರು. ಹೀಗೆ ಸಂಭ್ರಮಿಸಿದರೆ ಅವರನ್ನು ದೇಶದ್ರೋಹ ಪ್ರಕರಣ ದಾಖಲು ಮಾಡಲಾಗುವುದು ಎಂದು ಯೋಗಿ ಆದಿತ್ಯನಾಥ್ ಎಚ್ಚರಿಕೆಯ ಮಾತನ್ನು ಹೇಳಿದ್ದಾರೆ. ನಿನ್ನೆ ನಡೆದ ಹಿಂದಿ ಪತ್ರಿಯ ಸಂದರ್ಶನದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಈ ವಿಚಯವನ್ನು ಸ್ಪಷ್ಟಪಡಿಸಿದ್ದಾರೆ. ಇದೀಗ ಯೋಗಿ ಆದಿತ್ಯನಾಥ್ ಹೇಳಿಕೆ ದೇಶದೆಲ್ಲೆಡೆ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಪತ್ರಿಕೆಯ ಸಂದರ್ಶನದ ಪ್ರತಿಯನ್ನು ಆದಿತ್ಯನಾಥ್ ಅವರ ಕಚೇರಿಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಶೇರ್ ಮಾಡಲಾಗಿದ್ದು, ಪಾಕಿಸ್ತಾನದ ವಿಜಯವನ್ನು ಆಚರಿಸುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವ ಕುರಿತು ಹಿಂದಿಯಲ್ಲಿ ಒಂದು ಸಾಲು ಹಾಕಲಾಗಿದೆ.

- Advertisement -

Latest Posts

Don't Miss