Friday, November 22, 2024

Latest Posts

Selvamma : ಸೆಲ್ವಮ್ಮನ ಗಾಡಿ ವಾಪಾಸ್ ಕೊಡಿ..!

- Advertisement -

Banglore News : ಮನೆಯಲ್ಲಿ ಬೆಚ್ಚಗೆ ಮಕ್ಕಳು ಮರಿ ಮಕ್ಕಳೊಂದಿಗೆ ಆಟವಾಡುತ್ತ ನೆಮ್ಮದಿಯಿಂದ ಕಳೆಯಬೇಕಾದ ಸಮಯವದು  ಆದರೆ ಆ ವೃದ್ಧೆ ಮಾತ್ರ ಮಳೆ  ಚಳಿ ಅನ್ನೋದನ್ನೂ ಲೆಕ್ಕಿಸದೆ ತನ್ನ ದುಡಿಮೆಯೊಂದಿಗೆ ಕಾಲ ಕಳೆಯುತ್ತಿದ್ದಳು. ಇದ್ದುದರಲ್ಲೇ ತೃಪ್ತಿ ಪಟ್ಟು ಗಾಡಿಯಲ್ಲಿ ಜೋಳ  ಮಾರಿಕೊಂಡೇ ಜೀ ವನ ಸಾಗಿಸುತ್ತಿರಬೇಕಾದರೆ ಆಕೆ ಗಾಡಿ ಗೆ ಬಿಬಿಎಂಪಿ ಯವರ ಕೆಂಗಣ್ಣು ಬಿದ್ದೇ ಬಿಟ್ಟಿತ್ತು…ಮುಂದೇನಾಯ್ತು ನೀವೇ ನೋಡಿ…….

ಒಂದು ತಳ್ಳು ಗಾಡಿ ಅದರಲ್ಲಿ ಒಂದಷ್ಟು  ಜೋಳದ  ರಾಶಿ  ಮತ್ತೊಂದೆಡೆ  ಜೀವನೋಪಾಯಕ್ಕೆ ಸುಲಭ ಮಾರ್ಗಕ್ಕಾಗಿ ಸೌರ ಶಕ್ತಿ… ದಿನ ನಿತ್ಯ  ಪಾರ್ಕಿಗೆ ಬರೋ ಜನರೊಂದಿಗೆ ಪ್ರೀತಿಯಂದ  ವ್ಯವಹರಿಸುತ್ತಲೇ ವ್ಯಾಪಾರ ನಡೆಸುತ್ತಿದ್ದಳು ಸೆಲ್ವಮ್ಮ..ಸೆಲ್ವಮ್ಮ ಅಂದ್ರು ಅಲ್ಲಿನ ಜನರಿಗೆ ಅಚ್ಚುಮೆಚ್ಚು ಆದ್ರೆ ಆಕೆಗೆ ಕಂಟಕವಾಗಿದ್ದೇ ಬಿಬಿಎಂ ಗಾಡಿ.

ಹೌದು ಕಳೆದ ಮೂವತ್ತು ವರ್ಷಗಳಿಂದ ಬೆಂಗಳೂರು  ಕಬ್ಬನ್​ ಪಾರ್ಕ್​​ನ ಎಂಎಸ್​ ಬಿಲ್ಡಿಂಗ್​​​ನ ಹತ್ತಿರ ಇರುವ ಗೇಟಿನ ಬಳಿ ಜೋಳ ಮಾರಿಕೊಂಡು ಜೀವನ ಸಾಗಿಸುತ್ತಿದ್ದರು ವೃದ್ಧೆ ಸೆಲ್ವಮ್ಮ.  ಆದರೆ ಇದೀಗ ಬಿಬಿಎಂ ಪಿ ಯವರು ತನ್ನ ಗಾಡಿಯನ್ನು ತೆಗೆದುಕೊಂಡು ಹೋಗಿರೋದ್ರಿಂದ ಕಷ್ಟಪಡುವಂತಾಗಿದೆ. ಇತ್ತೀಚೆಗೆ ಅಕ್ಕಪಕ್ಕದ ಚಹಾ ಮತ್ತು ತಿಂಡಿತಿನಿಸು ಮಾರುವವರು ಈಕೆಯ ತಳ್ಳುಗಾಡಿಯನ್ನು ಎತ್ತಿ ಬಿಬಿಎಂಪಿ ಟ್ರಕ್​ನಲ್ಲಿ ಸಾಗಿಸಿದ್ದಾರೆ. ಇದಕ್ಕಾಗಿ ಅಜ್ಜಿ 2 ದಿನಗಳಿಂದ ತನ್ನ ಗಾಡಿಗಾಗಿ ಕಾದು  ಸುಸ್ತಾಗಿ ಹೋಗಿದ್ದಾರೆ. ಎರಡು ದಿನಗಳಿಂದ ಉಪವಾಸವಿರುವ ಈ ಅಜ್ಜಿ ಇದೇ ಜಾಗದಲ್ಲಿ ತನ್ನ ತಳ್ಳುಗಾಡಿಗಾಗಿ ಕಾದು ಕುಳಿತಿದ್ದಾಳೆ.

ಹಾಗಂತ ಸೆಲ್ವಮ್ಮ ಸುಮ್ಮನೆ ಈ ಗಾಡಿಗಾಗಿ  ಕಾದು ಕುಳಿತಿಲ್ಲ. ಬದಲಾಗಿ ಆಕೆಯ ಗಾಡಿಯಲ್ಲಿ ಒಂದು  ವಿಶೇಷ ಇತ್ತು. ಅದುವೇ ಸೌರ ಶಕ್ತಿ ಯೋಜನೆ. ಜೋಳವನ್ನು ಸುಡಲು ಈಕೆ ಸೌರಶಕ್ತಿಯನ್ನು ಬಳಸುತ್ತಿದ್ದಳು.

ಇನ್ನು ಈ ಘಟನೆ ನಡೆದದ್ದು  ಶನಿವಾರ ಜುಲೈ 22 ರಂದು ನಡೆದಿದ್ದು ಸೋಮವಾರ ಸೆಲ್ವಮ್ಮರ ಗಾಡಿಯನ್ನು ವಾಪಸ್ಸು ನೀಡುವುದಾಗಿ ಹೇಳಿದ್ದಾರೆ. ಇನ್ನು ತಾತ್ಕಾಲಿಕ  ಆಕೆಗೆ ಇನ್ನೊಂದು ಗಾಡಿ ನೀಡಿದ್ದರೂ  ಕೂಡಾ ಅದರಲ್ಲಿ ಕಟ್ಟಿಗೆಯಲ್ಲಿ ಜೋಳ ಸುಡುವುದು ಕಷ್ಟಕರ ಅದಕ್ಕಾಗಿ ಸೆಲ್ವಮ್ಮಗೆ ಆಕೆಯ ಗಾಡಿಯನ್ನು ಆದಷ್ಟು ಬೇಗ ನೀಡುವಂತೆ ಜನರು ಟ್ವಿಟರ್ ಮೂಲಕವೂ ಕೇಳಿಕೊಂಡಿರುವುದು ಸದ್ಯ ವೈರಲ್ ಸಂಗತಿಯಾಗಿದೆ.

Parking: ಪಾಲಿಕೆಗೆ ಸಂದಾಯವಾಗದ ಪಾರ್ಕಿಂಗ್ ಹಣ: ಆರ್ಥಿಕ ಸಂಕಷ್ಟದಲ್ಲಿ ಕಾರ್ಪೋರೇಷನ್..!

Unakal Lake : ಭರ್ತಿಯಾದ ಉಣಕಲ್ ಕೆರೆ, ಆತಂಕದಲ್ಲಿ ಗ್ರಾಮದ  ಜನರು..!

Hanitrap: ಸಚಿವರಾಗಿದ್ದಾಗ ಮುನಿರತ್ನ ಹನಿಟ್ರ್ಯಾಪ್ ಮಾಡಿಸುತ್ತಿದ್ದರು…!

- Advertisement -

Latest Posts

Don't Miss