- Advertisement -
ಬೆಂಗಳೂರು: ಪಕ್ಷೇತರ ಶಾಸಕರನ್ನು ತಮ್ಮತ್ತ ಸೆಳೆಯುವಲ್ಲಿ ಬಹುತೇಕ ಯಶಸ್ವಿಯಾಗಿರೋ ಮೈತ್ರಿ ಸರ್ಕಾರದ ವಿರುದ್ಧ ಇದೀಗ ಕಾಂಗ್ರೆಸ್ ಹಿರಿಯ ಮುಖಂಡರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಪಕ್ಷೇತರ ಶಾಸಕರನ್ನು ಸೆಳೆದು ಸರ್ಕಾರವನ್ನು ಸುಭದ್ರಗೊಳಿಸೋ ನಿಟ್ಟಿನಲ್ಲಿ ಮೈತ್ರಿ ನಾಯಕರು ಓಡಾಡ್ತಿದ್ದಾರೆ. ಆದ್ರೆ ಇತ್ತ, ನಾವು ಪಕ್ಷದಲ್ಲಿ ಇಷ್ಟು ವರ್ಷ ನಿಷ್ಠಾವಂತರಾಗಿ ದುಡಿದದ್ದಕ್ಕೆ ಮನ್ನಣೆ ನೀಡದೆ ಪಕ್ಷೇತರರಿಗೆ ಮಣೆ ಹಾಕುತ್ತಿರೋದಕ್ಕೆ ಮುನಿಸಿಕೊಂಡಿದ್ದಾರೆ. ಅಲ್ಲದೆ ಮೈತ್ರಿ ನಾಯಕರ ಈ ನಿರ್ಧಾರದ ಪರಿಣಾಮವನ್ನು ಅವರೇ ಅನುಭವಿಸಲಿ, ಯಾರಿಗಾದ್ರೂ ಮಂತ್ರಿಗಿರಿ ನೀಡಲಿ ನಾವು ತಲೆಕೆಡಿಸಿಕೊಳ್ಳೋದಿಲ್ಲ ಅಂತ ಹೇಳಿಕೊಂಡಿದ್ದಾರೆ. ಇನ್ನು ಇವರ ಈ ನಿರ್ಧಾರದಿಂದ ಪಕ್ಷದ ಚಟುವಟಿಕೆಗಳಿಂದಲೂ ದೂರ ಉಳಿಯೋ ನಿರ್ಧಾರ ಮಾಡಲು ಮುಂದಾಗಿದ್ದಾರೆ ಅಂತ ತಿಳಿದುಬಂದಿದೆ.
ಕೊಟ್ಟ ಮಾತು ಉಳಿಸಿಕೊಂಡ ಕುಮಾರಣ್ಣ. ಮಿಸ್ ಮಾಡದೇಈ ವಿಡಿಯೋ ನೋಡಿ
- Advertisement -