www.karnatakatv.net :ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕಂದಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯನ್ನು ಹಿರಿಯ ವಿದ್ಯಾರ್ಥಿಗಳು ಬಣ್ಣಗಳಿಂದ ಕಂಗೊಳಿಸುವಂತೆ ಮಾಡಿದ್ದಾರೆ.
ಕೊರೋನಾ ನಡುವೆ ಶಾಲಾ ಚಟುವಟಿಕೆಗಳೇ ಇಲ್ಲದೆ ಶಾಲೆ ಸ್ಥಿತಿ ಹೇಳತೀರದಾಗಿತ್ತು ಇದನ್ನ ಗಮನಿಸಿದ ಹಿರಿಯ ವಿದ್ಯಾರ್ಥಿಗಳು ನಮ್ಮೂರ ಶಾಲೆಯನ್ನ ಮತ್ತಷ್ಟು ಆಕರ್ಷಕವಾಗಿಸಿದ್ದಾರೆ. ಈ ಮೂಲಕ ಹಿರಿಯ ವಿದ್ಯಾರ್ಥಿಗಳು ಓದಿದ ಶಾಲೆಗೆ ಗೌರವ ಸಮರ್ಪಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಾಗಿದ್ದು, ಖಾಸಗಿ ಶಾಲೆಯ ಬಹುತೇಕ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಓದಲು ಮನಸ್ಸು ಮಾಡಿದ್ದಾರೆ. ಯಾವ ಖಾಸಗಿ ಶಾಲೆಗಳಿಗೂ ಹಳ್ಳಿಯ ಸರ್ಕಾರಿ ಶಾಲೆಗಳು ಕಡಿಮೆ ಇರದಂತೆ ಮಾಡಿದ್ದಾರೆ. ಇಷ್ಟೇ ಅಲ್ಲದೆ ಶಾಲೆಯ ಹಿರಿಯ ವಿದ್ಯಾರ್ಥಿಯೊಬ್ಬ ಮಕ್ಕಳ ಕಲಿಕೆ ಗುಣಮಟ್ಟ ಹೆಚ್ಚಿಸಲು, ಸ್ಮಾರ್ಟ್ ಕ್ಲಾಸ್ ಅಳವಡಿಕೆ ಮಾಡಿದ್ದಾರೆ. ಕಂಪ್ಯೂಟರ್, ಪ್ರಿಂಟರ್ ವ್ಯವಸ್ಥೆಯನ್ನ ಕೊಡುಗೆಯಾಗಿ ಶಾಲೆಗೆ ನೀಡಿದ್ದಾರೆ. ಪ್ರಸ್ತುತ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ನೋಟ್ ಪುಸ್ತಕ, ಪೆನ್ನುಗಳನ್ನವಿತರಿಸಿ ಮಾದರಿಯಾಗಿದ್ದಾರೆ.
ಮಂಕಾಗಿದ್ದ ಶಾಲೆಯನ್ನ ಕಂದಿಕೆರೆ ಗ್ರಾಮದ ಹಳೆಯ ವಿದ್ಯಾರ್ಥಿಗಳು ಸುಣ್ಣ, ಬಣ್ಣಗಳಿಂದ ಕಗೊಳಿಸುವಂತೆ ಮಾಡಿದ್ದಾರೆ. ಸಣ್ಣಪುಟ್ಟ ರಿಪೇರಿಗಳನ್ನ ಮಾಡಿದ್ದಾರೆ. ಶಾಲೆಯ ಗೋಡೆಗಳಿಗೆ ವಿಭಿನ್ನವಾದ ಚಿತ್ರಗಳನ್ನು ಬಿಡಿಸುವ ಮೂಲಕ ಶಾಲೆಯ ಅಂದ ಹೆಚ್ಚಿಸಿದ್ದಾರೆ. ತಾಲೂಕಿನ ವಿವಿಧ ಅನೇಕ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದೆ. ಈ ಶಾಲೆ ಅಭಿವೃದ್ಧಿಯಾದ ರೀತಿ ಉಳಿದ ಶಾಲೆಗಳು ಅಭಿವೃದ್ಧಿಗೆ ಸರ್ಕಾರವನ್ನೇ ಎದುರು ನೋಡದೆ.
ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ- ತುಮಕೂರು